ಮೀನು ಮಾರುಕಟ್ಟೆಗೆ ಕೂಡಿಬಂದಿಲ್ಲ ಮುಹೂರ್ತ..!

ಯಾದಗಿರಿ: ಅವ್ರು ಬಡ ಜನ್ರು ನಿತ್ಯ ವ್ಯಾಪಾರ ಆದ್ರೆ ಅವರಿಗೆಲ್ಲ ಒಂದು ಹೊತ್ತಿನ ಊಟ. ಇಲ್ಲಂದ್ರೆ ಉಪವಾಸ, ಬೆಳಗಿನ ಜಾವ ಎದ್ದು ನದಿ, ಹಳ್ಳ, ಕೊಳ್ಳ ಸುತ್ತಿ ಸಿಕ್ಕ ಅಲ್ಪಸ್ವಲ್ಪ ಮೀನುಗಳನ್ನ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಆದ್ರೆ ಈಗ ಮೀನು ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಹಂದಿ, ನಾಯಿಗಳು ಓಡಾಡುವ ಜಾಗದಲ್ಲಿ ಜನ ಮೀನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಗಿರಿಗಳ ನಾಡು ಯಾದಗಿರಿ ಜಿಲ್ಲೆಯ ಮೀನು ಮಾರಾಟಗಾರರ ಗೋಳು. ಯಾದಗಿರಿ ನಗರದ ಶಾಸ್ತ್ರಿ ವೃತ್ತದ ಬಳಿ ಇರುವ ಮುಖ್ಯ ರಸ್ತೆ ಬದಿಯಲ್ಲಿ ಗಿರಿನಾಡು ಯಾದಗಿರಿ ಜಿಲ್ಲೆಯಾಗಿ ಇಲ್ಲಿಗೆ ಎಂಟು ವರ್ಷಗಳು ಕಳೆದ್ರು ಜಿಲ್ಲೆಯಲ್ಲಿ ಯಾವೊಂದು ಸುಸಜ್ಜಿತ ಮಾರುಕಟ್ಟೆ ಕಾಣಸಿಗಲ್ಲ.

ಕಳೆದ ಹತ್ತು ವರ್ಷಗಳಿಂದ ಮೀನುಗಾರರು ಇದೇ ರಸ್ತೆ ಬದಿಯಲ್ಲಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸ್ವಚ್ಚತೆ ಎಂಬುದು ಇಲ್ಲವೇ ಇಲ್ಲ. ಜನ ಇಲ್ಲಿಗೆ ಬಂದು ಮೀನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೀನು ಮಾರಾಟದಿಂದ ಜೀವನ ನಡೆಸುವ ಮೀನುಗಾರರ ಬದುಕು ಈಗ ಅಂತ್ರವಾಗಿದೆ. ಈ ಬಗ್ಗೆ ಸಾಕಷ್ಟು ಭಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ್ರು ಪ್ರಯೋಜನವಾಗಿಲ್ಲ ಅಂತಾರೆ ವ್ಯಾಪಾರಸ್ಥರು. ಸುಮಾರು 35 ಕ್ಕೂ ಹೆಚ್ಚು ಮೀನುಗಾರರು ನಿತ್ಯ ಇದೇ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಾರೆ. ಇಲ್ಲಿ ನಾಯಿ, ಹಂದಿಗಳ ಓಡಾಡಿದ್ರು ಹೊಟ್ಟೆ ಪಾಡಿಗಾಗಿ ಮೀನುಗಾರರು ವ್ಯಾಪಾರ ಮಾಡಬೇಕಾಗಿದೆ. ಆದ್ರೆ ಜಿಲ್ಲೆಯ ಜನ್ರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ಮೀನು ಮಾರುಕಟ್ಟೆ ನಿರ್ಮಾಣ ಮಾಡುವಲ್ಲಿ ವಿಫಲವಾಗಿದ್ದಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದಾದ್ರು ಜಿಲ್ಲಾಡಳಿತ ಇದರ ಬಗ್ಗೆ ಗಮನ ನೀಡಿ ನಗರದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಿದ್ರೆ ಮೀನು ಮಾರಾಟಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಕಳೆದ ವರ್ಷ ಈ ಪ್ರಾದೇಶಿಕ ಆಯುಕ್ತರಾದ “ಆಮ್ಲಾನ್ ಆದ್ಯಾತ್ ಬಿಸ್ವಾಸ್ (ಆರ್.ಸಿ- ಕಲ್ಬುರ್ಗಿ) ಮೀನು ಮಾರಾಟಗಾರರ ಸಮಸ್ಯೆಗೆ ಸ್ಪಂದಿಸಿ ಮಾರುಕಟ್ಟೆ ನಿರ್ಮಿಸುವುದಾಗಿ ಭರವಸೆ ನೀಡಿದ್ರು. ಆದ್ರೆ ಆಯುಕ್ತರ ಭರಸೆ ಹುಸಿಯಾಗಿದೆ ಎನ್ನುತ್ತಾರೆ ಮೀನುಗಾರರು. ಹತ್ತು ವರ್ಷಗಳಿಂದ ರಸ್ತೆ ಬದಿ ಮೀನು ಮಾರಾಟ ಮಾಡುತ್ತಿದ್ದ ಮೀನುಗಾರರ ಬದುಕು ಈಗ ಅಂತತ್ರವಾಗಿದೆ. ಇನ್ನಾದ್ರು ಜಿಲ್ಲಾಡಳಿತ ಮೀನುಗಾರರ ಬೇಡಿಕೆಗೆ ಸ್ಪಂದಿಸಿ, ನಗರದಲ್ಲಿ ಸುಸಜ್ಜಿತವಾದ ಮೀನು  ಮಾರುಕಟ್ಟೆ ನಿರ್ಮಿಸಿ ಕೊಡುತ್ತಾ ಕಾದು ನೋಡಬೇಕಾಗಿದೆ.
ವಿಶೇಷ ವರದಿ: ಶಿವಪ್ಪ ಕುರಿ, ಫಸ್ಟ್ ನ್ಯೂಸ್​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv