ಭಾರತ ಮಾತೆಯನ್ನ ವಿವಸ್ತ್ರಳನ್ನಾಗಿ ಮಾಡ್ತಿದ್ದೇವೆ: ಸ್ಪೀಕರ್ ರಮೇಶ್​​ಕುಮಾರ್ ವ್ಯಥೆ

ರಾಯಚೂರು: ವಿಧಾನಸಭೆ ಸ್ಪೀಕರ್ ರಮೇಶ್​​ಕುಮಾರ್ ಅವರು ಪ್ರಸ್ತುತ ವಿದ್ಯಮಾನಗಳ ಕುರಿತು ಭಾರತ ಮಾತೆಯನ್ನ ನಾವು ವಿವಸ್ತ್ರಳನ್ನಾಗಿ ಮಾಡುತ್ತಿದ್ದೇವೆ ಅಂತಾ ಮಾರ್ಮಿಕವಾಗಿ ಮಾತನಾಡಿ ಅಸಮಾಧಾನ ಹೊರಹಾಕಿದ್ದಾರೆ. ರಾಯಚೂರಿನಲ್ಲಿ ನಡೆದ ಎಎಂಇ ಡೆಂಟಲ್ ಕಾಲೇಜಿನ ಬೆಳ್ಳಿ ಮಹೋತ್ಸವ ಸಮಾರಂಭದ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ರಸ್ತೆಗಳ ಬದಿಯಲ್ಲಿ ಡಾಬಾಗಳು ಆಗುತ್ತಿವೆ. ಬಿಯರ್‌ ಮೇಲೆ ಎಷ್ಟೇ ಟ್ಯಾಕ್ಸ್ ಹಾಕಿದರೂ ಜಾಸ್ತೀನೆ ಸೇಲ್ ಆಗುತ್ತಿದೆ. ನಮ್ಮ ಜನರಿಗೆ ಬಾಯಾರಿಕೆ ಜಾಸ್ತಿ ಆಗುತ್ತಿದೆ. ಅವರು ತಾನೇ, ಏನ್ ಮಾಡುತ್ತಾರೆ? ಕುಡಿಯಲೇ ಬೇಕಲ್ಲ ಎಂದ ಅವರು, ಈ ಎಲ್ಲದರ ಮಧ್ಯೆ ನಾವು ಹೆಮ್ಮಯ ಭಾರತ, ಸೋಲಿಲ್ಲದ ಸರದಾರ, ಭಾರತಕ್ಕೆ ಬಂದ ರತ್ನ, ವೀರಾಧಿವೀರ ಎಂದ ಸ್ವತಃ ನಾವು ವಿರಾಧಿವೀರರೆಲ್ಲ ಸೇರಿಕೊಂಡು ಭಾರತ ಮಾತೆಗೆ ಒಂದೊಂದು ದಿನಕ್ಕೆ ಆಕೆಯ ಮೈಮೇಲಿಂದ ಒಂದೊಂದೇ ವಸ್ತ್ರವನ್ನು ತೆಗೆದು ಅವಳನ್ನ ವಿವಸ್ತ್ರಳನ್ನಾಗಿ ಮಾಡಿ, ಈಗ ಅಂಗವೈಕಲ್ಯ ಮಾಡಲೂ ಶುರು ಮಾಡಿದ್ದೇವೆ. ಕೈ ಒಬ್ಬ ಎಳೆಯೋದು, ಕಾಲೊಬ್ಬ ಎಳೆಯೋದು ಮಾಡುತ್ತಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು. ನಾನು ವಿಧಾನ ಸಭೆಯ ಅಧ್ಯಕ್ಷ, ಅಧಿವೇಶನ ನಡೆಯುತ್ತಿದ್ದೆ. ರಾಜ್ಯದಲ್ಲಿ ಈ ಬಾರಿ ಬೇಸಿಗೆಗೆ ಮುನ್ನವೇ ಬಿಸಿಲು ಶುರುವಾಗಿದೆ. ಬಿಸಿಲು ಜಾಸ್ತಿ ಇದೆ ಬೆಂಗಳೂರಲ್ಲಿ. ನಾನು ಏನೇ ಮಾತಾಡಿದ್ರು ಕೂಡ ಅದು ವಸ್ತು ಆಗಿಬಿಡುತ್ತೆ ಎಂದ ಅವರು ನಿಮ್ಮ ಹೊಡೆತಕ್ಕೆ ಸಿಕ್ಕದೆ, ನಿಮಗೆ ಏನೂ ವಸ್ತುವನ್ನ ನೀಡದೇ, ಬಂದಿದಕ್ಕೆ ಖಾಲಿ ಆಗದೇ ಸರ್ಕಾರದಿಂದ ಪ್ರಯಾಣ ಭತ್ಯೆ ತೆಗೆದುಕೊಂಡಿದ್ದೇನೆ ಎಂದು ಪ್ರಚಲಿತ ಸನ್ನಿವೇಶ ಹಾಗೂ ರಾಜಕೀಯದ ಕುರಿತು ಮಾರ್ಮಿಕವಾಗಿ ಮಾತನಾಡಿದ್ರು.