‘ನಾವು ಉಳ್ಳವರ ಮನೆಗೆ ಹೋಗಿದ್ದರೆ, ಬರುವಾಗ ಕಾಲಿನ ಧೂಳನ್ನೂ ಝಾಡಿಸಿ ಬರಬೇಕು’

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಇಂದು ವಿಧಾನಸಭಾ ಕಲಾಪದ ವೇಳೆ ತಮ್ಮ ತಾಯಿಯನ್ನ ನೆನೆದು ಭಾವುಕರಾದರು. ಕಲಾಪ ಆರಂಭ ಆಗುತ್ತಿದ್ದಂತೆ ಆಪರೇಷನ್ ಕಮಲದ ಆಡಿಯೋದ ಮೇಲೆ ಮಾತು ಆರಂಭಿಸಿದ ಸ್ಪೀಕರ್ ರಮೇಶ್, ಆಡಿಯೋದಲ್ಲಿ ನನ್ನ ಹೆಸರು ಕೇಳಿ ಬಂದಿರೋದ್ರಿಂದ ನನಗೆ ತುಂಬಾ ನೋವಾಗಿದೆ. ನನ್ನ ತಾಯಿಗೆ ಅಕ್ಷರ ಜ್ಞಾನ ಇರಲಿಲ್ಲ. ನಾನು ನಮ್ಮ ತಾಯಿಗೆ 8ನೇ ಮಗ. ನಮ್ಮ ತಾಯಿ ನನಗೆ ಒಂದು ಮಾತನ್ನ ಹೇಳಿದ್ದರು. ನಾವು ನಮಗಿಂತ ಉಳ್ಳವರ ಮನೆಗೆ ಹೋಗಿದ್ದರೆ, ಅವರ ಮನೆಯಿಂದ ಹೊರ ಬರುವಾಗ ನಾವು ಅವರ ಮನೆಯ ಹಸ್ತಿಲಲ್ಲಿ ಸ್ವಲ್ಪ ನಿಲ್ಲಬೇಕು. ನಿಂತು ಬರೀ ಅಂಗಾಲನ್ನ ಅವರ ಹಸ್ತಿಲ ಮೇಲೆ ಹಾಕಿ, ಅಲ್ಲಿ ತಾಗಿದ್ದ ಧೂಳನ್ನೂ ಸಹ ಅವರ ಮನೆಯಲ್ಲಿಯೇ ಬಿಟ್ಟು ಬರಬೇಕು ಎಂದು ಅಮ್ಮ ಹೇಳಿದ್ದರು. ಇದು ನನಗೆ ತಾಯಿ ಹೇಳಿಕೊಟ್ಟಿರುವ ಪಾಠ ಅಂತಾ ಭಾವುಕರಾದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv