ಕೆಸಿ ವ್ಯಾಲಿ ಯೋಜನೆ: ಖುಷಿಯಿಂದ ಕಣ್ಣೀರಿಟ್ಟ ಸ್ಪೀಕರ್ ರಮೇಶ್​ಕುಮಾರ್​..!

ಕೋಲಾರ: ಕೆಸಿ ವ್ಯಾಲಿ ಯೋಜನೆ ಮೂಲಕ ಕೋಲಾರ ನಗರಕ್ಕೆ ನೀರು ಆಗಮಿಸಿದ್ದಕ್ಕೆ ಸ್ಪೀಕರ್ ರಮೇಶ್​ಕುಮಾರ್ ಕಣ್ಣೀರಿಟ್ಟ (ಆನಂದ ಭಾಷ್ಪ) ಪ್ರಸಂಗ ಇಂದು ನಡೆಯಿತು. ಸ್ವಾತಂತ್ರ್ಯ ಬಂದ ನಂತರ ಕೋಲಾರ ಜಿಲ್ಲೆಗೆ ಮೊದಲ ನೀರಾವರಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ರಮೇಶ್​ಕುಮಾರ್ ಕಣ್ಣಲ್ಲಿ ಆನಂದ ಭಾಷ್ಪ ಬಂದಿದೆ.

ಮಾಧ್ಯಮದವರು ಕೆಸಿ ವ್ಯಾಲಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಭಾವುಕರಾಗಿ ಮಾತನಾಡಿದ ರಮೇಶ್ ಕುಮಾರ್, ಕೋಲಾರ ತಾಲೂಕಿನ ಲಕ್ಷೀಸಾಗರ ಕೆರೆಗೆ ಇಂದು ಕೆಸಿ ವ್ಯಾಲಿ ನೀರು ಬಂದಿದೆ. ಜಿಲ್ಲೆಗೆ ನೀರು ಸಿಕ್ಕಿದ್ದು ಪೂರ್ವಕಾಲದ ಪುಣ್ಯ ಎಂದು ಬಣ್ಣಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv