ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಕನ್ನಡಿಗ ಡಾ. ಎಸ್.​​ಕೆ ಶಿವಕುಮಾರ್​ ವಿಧಿವಶ

ಬೆಂಗಳೂರು: ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್​​ಕೆ ಶಿವಕುಮಾರ್​ ವಿಧಿವಶರಾಗಿದ್ದಾರೆ. ಮೈಸೂರು ಮೂಲದವರಾದ ಶಿವಕುಮಾರ್​ ಚಂದ್ರಯಾನ-1ಗೆ ಟೆಲಿಮೆಟ್ರಿ ಸಿಸ್ಟಮ್​ ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದರು. ಇಸ್ರೋ ಸ್ಯಾಟಿಲೈಟ್​ ಸೆಂಟರ್​ ಹಾಗೂ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಸೆಂಟರ್​​ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಶಿವಕುಮಾರ್​ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ಮೈಸೂರು ವಿಶ್ವವಿದ್ಯಾಲಯ ಶಿವಕುಮಾರ್​ ಅವರಿಗೆ ಗೌರವ ಡಾಕ್ಟರೇಟ್​ ನೀಡಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv