‘ಮೋದಿನ್ನ ಬಿಡಲ್ಲ, ಮುಗಿಸ್ತೀವಿ’ ಧಾರವಾಡ ಎಸ್​​ಪಿ ಕಚೇರಿಗೆ ಬೆದರಿಕೆ ಪತ್ರ

ಧಾರವಾಡ: ಜಿಲ್ಲೆಯ ಎಸ್​​ಪಿ ಕಚೇರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಜೀವ ಬೆದರಿಕೆಯ ಪತ್ರ ಬಂದಿದೆ. ಮೋದಿಯನ್ನ ಫಿನಿಶ್ ಮಾಡ್ತೇವೆ, ಮೋದಿ ರೈತರಿಗೆ ಯಾವ ರೀತಿ ಸಹಾಯ ಮಾಡಿಲ್ಲ. ಬರೀ ವಿದೇಶ ಪ್ರವಾಸದಲ್ಲಿ ಕಾಲ ಕಳೆದ ಮೋದಿ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಾವು ಪಾಕಿಸ್ತಾನದ ಭಯೋತ್ಪಾದಕರು. ಮೋದಿಯನ್ನ ಉಳಿಸಲು ಬಿಡುವುದಿಲ್ಲ ಅಂತಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಪತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಇದು ಫೇಕ್ ಪತ್ರ ಇರಬಹುದು ಅಂತಾ ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ರಸ್ತೆ ಹಾಗೂ ಕಾರ್ಯಕ್ರಮ ಸ್ಥಳದಲ್ಲಿ ಭಾರೀ ಬಂದೋಬಸ್ತ್ ಹಾಕಲಾಗಿದೆ. ಎರಡೂವರೆ ಸಾವಿರಕ್ಕಿಂತ ಹೆಚ್ಚು ಪೊಲೀಸರ ನಿಯೋಜನೆಯಾಗಿದ್ದು, 18 ಕೆಎಸ್ಆರ್‌ಪಿ ತುಕುಡಿ ನಿಯೋಜನೆಯಾಗಿದೆ.

ಎರಡು ದಿನದ ಹಿಂದೆ ಧಾರವಾಡ ಎಸ್ಪಿ ಕಚೇರಿಗೆ ಈ ಪತ್ರ ಬಂದಿದೆ. ನಾವು ಕಟ್ಟುನಿಟ್ಟಿನ ವ್ಯವಸ್ಥೆ ಮಾಡುತ್ತಿದ್ದೇವೆ. ಪತ್ರ ಬರಲಿ ಬಿಡಲಿ, ಅದು ಬೇರೆ ವಿಷಯ. ಆದ್ರೆ ನಮ್ಮ ವ್ಯವಸ್ಥೆ ಪರ್ಫೆಕ್ಟ್ ಆಗಿರುತ್ತದೆ ಎಂದು ಧಾರವಾಡ ಎಸ್ಪಿ ಕಚೇರಿಗೆ ಬೆದರಿಕೆ ಪತ್ರ ಬಂದಿರೋ ವಿಚಾರದ ಬಗ್ಗೆ ಎಡಿಜಿಪಿ ಕಮಲ್ ಪಂಥ್ ಹೇಳಿದ್ದಾರೆ.