ವೃದ್ಧರ ಆಸೆ ಈಡೇರಿಸಿದ ಎಸ್‌ಪಿ ಅಣ್ಣಾಮಲೈ

ಚಿಕ್ಕಮಗಳೂರು: ಕಳೆದೊಂದು ವರ್ಷದಿಂದ ಎಸ್‌ಪಿ ಅಣ್ಣಾಮಲೈ ಅವರನ್ನು ನೋಡಬೇಕು ಅಂದುಕೊಂಡಿದ್ದ ವೃದ್ಧರ ಕನಸು ನನಸಾಗಿದೆ. ಚಿಕ್ಕಮಗಳೂರಿನ ಅನ್ನಪೂರ್ಣೆಶ್ವರಿ ಅನಾಥ ವೃದ್ಧಾಶ್ರಮಕ್ಕೆ ಎಸ್‌ಪಿ ಅಣ್ಣಾಮಲೈ ದಿಢೀರನೇ ಭೇಟಿ ನೀಡಿ, ವೃದ್ಧರ ಯೋಗಕ್ಷೇಮ ವಿಚಾರಿಸಿದರು. ಅಣ್ಣಾಮಲೈ ಅವರನ್ನು ನೋಡುತ್ತಿದ್ದಂತೆ, ವೃದ್ಧರು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡರು. ಈ ವೇಳೆಿ ಅಣ್ಣಾಮಲೈ ವೃದ್ಧರನ್ನು ಸಂತೈಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv