ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ದಿನೇಶ್​ ಮತದಾನ

ಶಿವಮೊಗ್ಗ: ನೈರುತ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಇಂದು ಬೆಳಗ್ಗೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 74 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಸ್​​.ಪಿ.ದಿನೇಶ್​ ಮತದಾನ ಹಕ್ಕು ಚಲಾಯಿಸಿದರು. ಶಿವಮೊಗ್ಗ ವಿನೋಬನಗರದ ಮತಗಟ್ಟೆ ಸಂಖ್ಯೆ 52ರಲ್ಲಿ ದಿನೇಶ್​ ಮತದಾನ ಮಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv