‘ಜೋಗಿ’ ಪ್ರೇಮ್​ಗೆ ತೊಡೆ ತಟ್ಟಿದ ಸೌತ್​ ಸ್ಟಾರ್​..!

ಸೌತ್​ ಇಂಡಿಯಾದ ವರ್ಸಟೈಲ್​ ನಟರ ಲಿಸ್ಟ್​ನಲ್ಲಿ ಮಿಸ್​ ಇಲ್ಲದೇ ಹೇಳುವಂತ ನಟ ಜೆ.ಡಿ.ಚಕ್ರವರ್ತಿ. ಬಹುಭಾಷಾ ನಟನಾಗಿ ಜೆ.ಡಿ. ದೊಡ್ಡ ಹೆಸರು ಸಂಪಾದಿಸಿದ್ದಾರೆ. ಸೌತ್​ ಇಂಡಿಯಾದ ಬಹುತೇಕ ಭಾಷೆಗಳಲ್ಲಿ ನಟಿಸಿರೋ ಇವರು ಇದೀಗ ಕನ್ನಡದಲ್ಲೂ ಬ್ಯುಸಿಯಾಗ್ತಿದ್ದಾರೆ. ಈಗಾಗಲೇ ಅರ್ಜುನ್​ ಸರ್ಜಾ ಜೊತೆಗೆ ‘ಕಾಂಟ್ರ್ಯಾಕ್ಟ್’ ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮೊದಲೇ ಜೆಡಿಗೆ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ದೊಡ್ಡ ಆಫರ್ಸ್ ಹುಡುಕಿ ಬರ್ತಿವೆ. ಇದೀಗ ಜೋಗಿ ಪ್ರೇಮ್​ ನಟನೆಯ ಬಹುನಿರೀಕ್ಷಿತ ‘ಗಾಂಧಿಗಿರಿ’ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪ್ರೇಮ್​ಗೆ ‘ಜೆಡಿ’ ಟಕ್ಕರ್..!
ರಘುಹಾಸನ್ ನಿರ್ದೇಶನದಲ್ಲಿ ಜೋಗಿ ಪ್ರೇಮ್ ನಾಯಕನಾಗಿ ನಟಿಸ್ತಾಯಿರೋ ಗಾಂಧಿಗಿರಿ ಸಿನಿಮಾ ಮೇಕಿಂಗ್ ಹಾಗೂ ಕ್ವಾಲಿಟಿಯಿಂದ ಗಾಂಧಿನಗರದಲ್ಲಿ ದೊಡ್ಡ ಟಾಕ್​ ಸೃಷ್ಟಿಸಿತ್ತು. ಇದೀಗ ಬಹುಭಾಷಾ ನಟ ಜೆ.ಡಿ ಚಕ್ರವರ್ತಿ ಗಾಂಧಿಗಿರಿ ಟೀಮ್​ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಡಬಲ್ ಶೇಡ್ ಇರೋ ಪಾತ್ರದಲ್ಲಿ ಜೆ.ಡಿ ಕಾಣಿಸಿಕೊಳ್ತಿದ್ದು ಪ್ರೇಮ್​ಗೆ ಎದುರಾಳಿಯಾಗಿ ಠಕ್ಕರ್ ಕೊಡಲಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ತುಪ್ಪದ ಬೆಡಗಿ ರಾಗಿಣಿ ಜೊತೆಯಾಗಿದ್ದಾರೆ. ಈಗಾಗಲೇ ‘ಪ್ರೇಮ್ ಅಡ್ಡ, ಡಿಕೆ ಸಿನಿಮಾದಲ್ಲಿ ಖದರ್ ತೋರಿಸಿದ್ದ ಪ್ರೇಮ್ ಇದೀಗ ಗಾಂಧಿಗಿರಿ ಮಾಡೋಕೆ ಬರ್ತಾಯಿದ್ದು, ಟೈಟಲ್​ನಿಂದಲೇ​ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv