ಗಂಗೂಲಿ ಪ್ರಕಟ ಮಾಡಿದ್ರು 2019ರ ವಿಶ್ವಕಪ್​ ತಂಡ..! ಒಂದು ಸರ್​ಪ್ರೈಸ್​ ಇದೆ..!

ಏಪ್ರಿಲ್ 15 ಸೋಮವಾರ. ಈ ದಿನವನ್ನ ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಎದುರು ನೋಡುತ್ತಿದ್ದಾರೆ. ಯಾಕಂದ್ರೆ ಟೀಮ್ ಇಂಡಿಯಾ ವಿಶ್ವಕಪ್​ ಸಂಭಾವನೀಯ ತಂಡ ಪ್ರಕಟವಾಗೋದೇ, ಅವತ್ತು. ಇನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಌಂಡ್ ಟೀಮ್, ಈಗಾಗಲೇ ಬಲಿಷ್ಟ ಕೊಹ್ಲಿ ಸೈನ್ಯವನ್ನ ರೆಡಿ ಮಾಡಿಕೊಂಡಿದೆ. ಸೋಮವಾರ ಮುಂಬೈನಲ್ಲಿ ಟೀಮ್ ಇಂಡಿಯಾವನ್ನ ಪ್ರಕಟ ಮಾಡೋ ಆಯ್ಕೆಗಾರರು, ಸರ್​ಪ್ರೈಸ್ ನೀಡ್ತಾರಾ..? ತಂಡದಲ್ಲಿ ಬದಲಾವಣೆ ಮಾಡ್ತಾರಾ..? ಅಥವಾ ನಿರೀಕ್ಷೆಯಂತೆ ಅದೇ ಆಟಗಾರರನ್ನ ಮುಂದುವರೆಸುತ್ತಾರಾ ಅನ್ನೋ ಪ್ರಶ್ನೆಗಳು, ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಆದ್ರೆ ಅಭಿಮಾನಿಗಳ ಪ್ರಶ್ನೆಗೆ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ತನ್ನ ವಿಶ್ವಕಪ್ ತಂಡವನ್ನ ಪ್ರಕಟಿಸಿರೋ ಗಂಗೂಲಿ, ಒಂದು ಸರ್​ಪ್ರೈಸ್ ಸಹ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವೇಗಿ ನವದೀಪ್ ಸೈನಿಯನ್ನ ಗಂಗೂಲಿ, ತನ್ನ ತಂಡದಲ್ಲಿ ಆಯ್ಕೆ ಮಾಡಿದ್ದಾರೆ. ಉಳಿದಂತೆ ಗಂಗೂಲಿ ಆಯ್ಕೆ ಮಾಡಿರೋ ತಂಡದಲ್ಲಿ ಯಾವೆಲ್ಲಾ ಆಟಗಾರರು ಇದ್ದಾರೆ ನೋಡೋಣ ಬನ್ನಿ.

2019ರ ವಿಶ್ವಕಪ್​ಗೆ ಗಂಗೂಲಿ ತಂಡ ಹೀಗಿದೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ರಿಶಭ್ ಪಂತ್, ಹಾರ್ದಿಕ್ ಪಾಂಡ್ಯ, ಕುಲ್​ದೀಪ್ ಯಾದವ್, ಯುಜುವಿಂದ್ರ ಚಹಲ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ನವದೀಪ್ ಸೈನಿ