2018ರ​​ ವಿಶ್ವಕಪ್​ ಫುಟ್ಬಾಲ್​ನಲ್ಲಿ ಮೆಸ್ಸಿ ದಾದಾಗಿರಿ..!

ರಷ್ಯಾದಲ್ಲಿ ನಡೆಯಲಿರುವ ಫಿಫಾ ವರ್ಲ್ಡ್​ ಕಪ್​ ಫುಟ್​ಬಾಲ್ ಟೂರ್ನಿ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ವಿಶ್ವದಾದ್ಯಂತ ಕೋಟ್ಯಾಂತರ ಫುಟ್​ಬಾಲ್​ ಅಭಿಮಾನಿಗಳ ಜೊತೆಗೆ ಕ್ರಿಕೆಟ್​ ದಿಗ್ಗಜ ಸೌರವ್​ ಗಂಗೂಲಿ ಕೂಡ ಕಾದು ಕುಳಿತಿದ್ದಾರೆ. ಅದರಲ್ಲೂ ದಾದಾ ಅರ್ಜೆಂಟೈನಾದ ಕ್ಯಾಪ್ಟನ್​ ಲಿಯೋನೆಲ್​ ಮೆಸ್ಸಿ ಮೇಲೆ ಹೋಪ್ ಹೊಂದಿದ್ದಾರೆ.

ಮೆಸ್ಸಿಯ ಬಿಗ್​ ಫ್ಯಾನ್​ ದಾದಾ
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಅರ್ಜೆಂಟೈನಾ ಫುಟ್​ಬಾಲ್​ ಕ್ಯಾಪ್ಟನ್​ ಲಿಯೋನೆಲ್ ಮೆಸ್ಸಿಯ ಬಿಗ್ ಫ್ಯಾನ್ ಆಗಿದ್ದಾರೆ. ಪಿಫಾ ವಿಶ್ವಕಪ್​ ಟೂರ್ನಿಯಲ್ಲಿ ಬ್ರೆಜಿಲ್ ನನ್ನ ಫೆವರೇಟ್​​ ಟೀಮ್, ಆದ್ರೆ ನಾನು ಮೆಸ್ಸಿಯ ಕಟ್ಟಾ ಅಭಿಮಾನಿ ಎಂದಿರುವ ದಾದಾ ಮೆಸ್ಸಿ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದೇನೆ ಎಂದಿದ್ದಾರೆ.

​ಬಹು ನಿರೀಕ್ಷಿತ 2018ರ ಫಿಫಾ ವರ್ಲ್ಡ್​​ ಕಪ್ ಗೆಲ್ಲುವ ರೇಸ್​​ನಲ್ಲಿ ಹಲವು ತಂಡಗಳಿದ್ದು, ಬ್ರೆಜಿಲ್​, ಅರ್ಜೆಂಟೈನಾ ಹಾಗೂ ಜರ್ಮನಿ ಈ ಸಲ ಕಪ್​ ಗೆಲ್ಲೋ ಫೆವರೇಟ್​ ತಂಡಗಳು ಎಂದು ಹೇಳಲಾಗ್ತಿದೆ. ಬ್ರೆಜಿಲ್​ನಲ್ಲಿ ನಡೆದಿದ್ದ 2014 ವರ್ಲ್ಡ್​​ ಕಪ್​ ಫೈನಲ್​ನಲ್ಲಿ ಮೆಸ್ಸಿ ತಮ್ಮ ದೇಶಕ್ಕೆ ಕಪ್ ತಂದು ಕೊಡುವ ನಿರೀಕ್ಷೆ ಹುಟ್ಟುಹಾಕಿದ್ರು. ಆದ್ರೆ ಫೈನಲ್​ ಪಂದ್ಯದಲ್ಲಿ ಜರ್ಮನಿ ವಿರುದ್ಧ 0-1ರಿಂದ ಸೋತು ನಿರಾಸೆ ಅನುಭವಿಸಿತ್ತು. ಆದ್ರೆ ಈ ಬಾರಿ ಮೆಸ್ಸಿ ಮ್ಯಾಜಿಕ್​ ಮಾಡುವ ನಿರೀಕ್ಷೆ ಇದೆ ಎಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv