ಹಾಲಿ ಕೋಚ್ ರವಿ ಶಾಸ್ತ್ರಿಗೆ ಮಾಜಿ ನಾಯಕ ಗಂಗೂಲಿ ‘ಪಂಚ್’..!

ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಹಾಲಿ ಕೋಚ್ ರವಿ ಶಾಸ್ತ್ರಿ ನಡುವೆ ಮತ್ತೆ ಮಾತಿನ ಸಮರ ನಡೆದಿದೆ. ಇತ್ತೀಚಿಗಷ್ಟೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಮುಂಬರುವ ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿಯನ್ನ ನಂಬರ್.4 ಸ್ಲಾಟ್​ನಲ್ಲಿ ಬ್ಯಾಟಿಂಗಿಳಿಸಲು ಚಿಂತನೆ ನಡೆಸಲಾಗ್ತಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು. ಆದ್ರೆ ರವಿ ಶಾಸ್ತ್ರಿಯ ಐಡಿಯಾಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ, ಸಿಡಿಮಿಡಿಗೊಂಡಿದ್ದಾರೆ. ಶಾಸ್ತ್ರಿ ಯಾವ ಉದ್ದೇಶದಿಂದ ಈ ಮಾತನ್ನ ಹೇಳಿದ್ರೋ ಗೊತ್ತಿಲ್ಲ..! ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್​ ಮಾಡ್ತಾರೋ ಗೊತ್ತಿಲ್ಲ..! ಆದ್ರೆ ರವಿ ಶಾಸ್ತ್ರಿಯ ಐಡಿಯ ನಾನು ಒಪ್ಪುವುದಿಲ್ಲ ಅಂತ ಗಂಗೂಲಿ ನೇರವಾಗಿ ಶಾಸ್ತ್ರಿಗೆ ತಿರುಗೇಟು ನೀಡಿದ್ದಾರೆ. ವಿಶ್ವಕಪ್​ನಂತಹ ದೊಡ್ಡ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಟಾಪ್ ತ್ರಿ ಬ್ಯಾಟಿಂಗ್​ ಲೈನ್​ಅಪ್ ಬಲಿಷ್ಟವಾಗಿರಬೇಕು. ಹೀಗಾಗಿ ಕೊಹ್ಲಿ ಮೂರನೇ ಕ್ರಮಾಂದಲ್ಲೇ ಬ್ಯಾಟಿಂಗ್ ಮಾಡಬೇಕು ಅನ್ನೋದು, ಮಾಜಿ ನಾಯಕ ಸೌರವ್ ಗಂಗೂಲಿಯ ವಾದವಾಗಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv