ನಾಮಿನೇಷನ್​​ಗೂ ಮುನ್ನ ಸೋನಿಯಾ ಗಾಂಧಿಯಿಂದ ಹೋಮ

ನವದೆಹಲಿ: ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಲೋಕಸಭಾ ಚುನಾವಣೆಗೆ ಇಂದು ರಾಯ್​​ಬರೇಲಿಯಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಅವರು ದೇವರ ಮೊರೆ ಹೋಗಿದ್ದಾರೆ. ಕಾಂಗ್ರೆಸ್​​ ಕೇಂದ್ರ ಕಚೇರಿಯಲ್ಲಿ ಸೋನಿಯಾ ಗಾಂಧಿ ಇಂದು ಹೋಮ ನಡೆಸಿದ್ದಾರೆ. ಪೂಜೆಯಲ್ಲಿ ಸೋನಿಯಾ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ವಾದ್ರಾ ಕೂಡ ಭಾಗಿಯಾಗಿದ್ದಾರೆ. ಹೋಮ ಮುಗಿದ ಬಳಿಕ ಸೋನಿಯಾ ಗಾಂಧಿ ರೋಡ್​​ ಶೋ ನಡೆಸಿ ನಂತರ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

5ನೇ ಬಾರಿಗೆ ರಾಯ್​​ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಸ್ಪರ್ಧೆ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡಿರೋ ದಿನೇಶ್​​ ಪ್ರತಾಪ್ ಸಿಂಗ್, ಸೋನಿಯಾ ವಿರುದ್ಧ ಕಣಕ್ಕಿಳಿದಿದ್ದಾರೆ. ಮೇ 6ರಂದು ರಾಯ್​​ಬರೇಲಿ ಕ್ಷೇತ್ರದ ಮತದಾನ ನಡೆಯಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv