ಹೆತ್ತಮ್ಮನನ್ನೇ ಹತ್ಯೆಗೈದ ನೀಚ ಮಗ..!

ಹುಬ್ಬಳ್ಳಿ: ತನ್ನ ಚಟಕ್ಕೆ ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನ ಮಗನೇ ಕೊಲೆ ಮಾಡಿದ ನೀಚ ಕೃತ್ಯ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಯಲವದಾಳ ಗ್ರಾಮದಲ್ಲಿ ನಡೆದಿದೆ. ತಾಯಿ ಶಂಕ್ರವ್ವ ನಿಗದಿ (68)ಯನ್ನು ಮಗ ವೀರಭದ್ರಪ್ಪ ನಿಗದಿ ಕೊಲೆ ಮಾಡಿದ್ದಾನೆ. ವೀರಭದ್ರಪ್ಪ ಕುಡಿತದ ದಾಸನಾಗಿದ್ದ. ಸಾರಾಯಿ ಕುಡಿಯಲು ಹಣ ಕೊಡದಿರುವ ಕಾರಣಕ್ಕೇ ತಾಯಿಯ ಜೀವವನ್ನೇ ತೆಗೆದಿದ್ದಾನೆ. ತಾಯಿ ಮತ್ತು ಮಗನ ಜಗಳ ಬಿಡಿಸಲು ಬಂದ ಪತ್ನಿ ಬಸವ್ವನ ಮೇಲೂ ವೀರಭದ್ರಪ್ಪ ಹಲ್ಲೆ ಮಾಡಿದ್ದಾನೆ. ಸದ್ಯ ಬಸವ್ವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv