ಪ್ರಚಾರಕ್ಕೆ ಬಂದ ‘ಕೈ’ ನಾಯಕರಿಗೆ ಮೋದಿ ಮೋದಿ ಎಂದು ಕೂಗಿ ಘೇರಾವ್​ ಹಾಕಿದ ಗ್ರಾಮಸ್ಥರು

ಮೈಸೂರು: ನಿನ್ನೆ ತಡರಾತ್ರಿ 10.30 ವೇಳೆಯಲ್ಲಿ ಪ್ರಚಾರಕ್ಕೆ ಬಂದ ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅಭ್ಯರ್ಥಿ ಧೃವನಾರಯಣ್​ಗೆ ವರುಣಾ ಕ್ಷೇತ್ರದ ಸೋಮೇಶ್ವರಪುರ ಗ್ರಾಮದ ಜನರು ಮೋದಿ ಮೋದಿ ಎಂದು ಕೂಗಿ ಘೇರಾವ್ ಹಾಕಿದ್ದಾರೆ. ಇದೇ ವೇಳೆ  ರಾತ್ರಿ ವೇಳೆಯಲ್ಲಿ  ಪ್ರಚಾರಕ್ಕೆ ಬಂದು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು  ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಕಾರಿನಿಂದ ಕೆಳಗೆ ಇಳಿಯದೇ ನಾಯಕರು  ಸ್ಥಳದಿಂದ ಕಾಲ್ಕಿತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲಿಸರ ನಡುವೆ ವಾಗ್ವಾದ ನಡೆಯಿತು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv