ಬಿಜೆಪಿ ಅಭ್ಯರ್ಥಿಗೆ ಯೋಧನ ಮತ; ಸೆಲ್ಫಿ ವೈರಲ್!

ವಿಜಯಪುರ: ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರಿಗೆ ಯೋಧರೊಬ್ಬರು ಮತ ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಮ್ಮನಜೋಗಿ ಗ್ರಾಮದ ಯೋಧ ಮಲ್ಲಿಕಾರ್ಜುನ ಪೂಜಾರಿ ರಮೇಶ್ ಜಿಗಜಿಣಗಿ ಅವರಿಗೆ ಮತ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಏಪ್ರಿಲ್ 9ರಂದು ಅಂಚೆ ಮೂಲಕ ಮಲ್ಲಿಕಾರ್ಜುನ್ ಮತದಾನ ಮಾಡಿದ್ದಾರೆ. ವಿಜಯಪುರ ಎಸ್​​ಸಿ ಮೀಸಲು ಕ್ಷೇತ್ರದ ಅಭ್ಯರ್ಥಿ ರಮೇಶ್ ಜಿಗಜಿಣಗಿಗೆ ಮತ ಹಾಕಿ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ಬ್ಯಾಲೆಟ್ ಪೇಪರ್‌ನಲ್ಲಿನ ಅಭ್ಯರ್ಥಿ ರಮೇಶ್ ಜಿಗಜಿಣಗಿ ಭಾವಚಿತ್ರದ ಎದುರು ಸರಿ ಚಿಹ್ನೆ ಬಳಸಿ‌ ಮತದಾನ ಮಾಡಿದ್ದಾರೆ. ಯೋಧ ಮತದಾನ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗೌಪ್ಯವಾಗಿರಬೇಕಿದ್ದ ಮತದಾನ ಪ್ರಕ್ರಿಯೆಯನ್ನು ಸೈನಿಕ ಬಹಿರಂಗಗೊಳಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv