ಆರ್​ಡಿಎಕ್ಸ್​ ಬ್ಲಾಸ್ಟ್, ರಾಜ್ಯದ ಯೋಧ ಹುತಾತ್ಮ

ಬಾಗಲಕೋಟೆ:  ಆರ್​ಡಿಎಕ್ಸ್​ ಬ್ಲಾಸ್ಟ್ ಆಗಿ ತಾಲೂಕಿನ ಇಲಾಳ ಗ್ರಾಮದ ಶ್ರೀಶೈಲ್ ರಾಯಪ್ಪ ಬಳಬಟ್ಟಿ(34) ಎಂಬ ಯೋಧ ಹುತಾತ್ಮರಾಗಿದ್ದಾರೆ. ಇಂದು ಬೆಳಿಗ್ಗೆ 5ಗಂಟೆ ಸಮಯದಲ್ಲಿ ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯ ರೆಜೂರಿ ಎಂಬಲ್ಲಿ ಆರ್​ಡಿಎಕ್ಸ್​ ಬ್ಲಾಸ್ಟ್ ಆಗಿದೆ. ಈ ಸಂದರ್ಭದಲ್ಲಿ ಯೋಧ ಶ್ರೀಶೈಲ್ ಸಾವನ್ನಪ್ಪಿದ್ದಾರೆ ಎಂದು ಸೇನೆ ಕುಟುಂಬಸ್ಥರಿಗೆ ಮಾಹಿತಿ ನೀಡಿದೆ. ಇನ್ನು 12 ವರ್ಷ ಹಿಂದೆ ಸೇನೆಗೆ ಸೇರಿದ್ದ ಶ್ರೀಶೈಲ್ ರಾಯಪ್ಪ, ಸದ್ಯ 12ನೇ ಮದ್ರಾಸ್ ಇನ್​ಫ್ಯಾಂಟ್ರಿ ರೆಜಿಮೆಂಟ್​ನಲ್ಲಿ  ಕಾರ್ಯನಿರ್ವಹಿಸುತ್ತಿದ್ದರು. ಶ್ರೀ ಶೈಲ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv