ಮೋದಿ ಪ್ರಚಾರಕ್ಕೆ 20 ದಿನ ಕೆಲ್ಸಕ್ಕೆ ರಜೆ ಹಾಕಿದ ಬೆಂಗಳೂರಿನ ಟೆಕ್ಕಿ..!

ಬೀದರ್: ದಿನದಿಂದ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಯುಟಿ ಇನ್ಫೋಸಲ್ಯುಷನ್​ ಕಂಪನಿಯಲ್ಲಿ ಸಾಫ್ಟ್​​ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಾ ರಾಜು ರೆಡ್ಡಿ ಎಂಬ ವ್ಯಕ್ತಿ ಪ್ರಧಾನಿ ಮೋದಿ ಪರ ಪ್ರಚಾರ ಮಾಡಲು 20 ದಿನ ರಜೆ ಹಾಕಿ ಬೀದರ್​​​​ಗೆ ಬಂದಿದ್ದಾರೆ. ಮೂಲತ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಿಠಲಾಪುರದವರಾದ ರಾಜು ರೆಡ್ಡಿ, ಮೋದಿಯನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ತಮ್ಮ ಕಂಪನಿಗೆ 20 ದಿನಗಳ ಕಾಲ ರಜೆ ಹಾಕಿ ಫೀಲ್ಡ್ ಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಬೈಕ್ ಱಲಿ ಮಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಯನ್ನ ಪ್ರಧಾನಿಯನ್ನ ಮಾಡಬೇಕು ಅದಕ್ಕೆ ಭಗವಂತ ಖೂಬಾ ಅವರಿಗೆ ಮತ ಚಲಾಯಿಸಿ ಅಂತಾ ಪ್ರಚಾರ ನಡೆಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ಸುಧೀಂದ್ರ ಹೆಬ್ಬಾರ್ ಎಂಬುವರು ಪ್ರಧಾನಿ ಪರ ಪ್ರಚಾರ ಮಾಡಲು ಆಸ್ಟ್ರೇಲಿಯಾದಲ್ಲಿನ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬಂದಿದ್ದರು. ಅದರ ಬೆನ್ನಲ್ಲೆ ಬೀದರ್ ನ ರಾಜು ರೆಡ್ಡಿ ಮೋದಿ ಪರ ಪ್ರಚಾರಕ್ಕೆ ಇಳಿದಿದ್ದು ವಿಶೇಷವಾಗಿದೆ. ಇದು ಬೀದರ್ ಜನತೆಯ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಅನ್ನೋದು ಸದ್ಯದ ಕುತೂಹಲ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv