ಸಾಮಾಜಿಕ ಜಾಲತಾಣಗಳು ನಿಮ್ಮ ಮಕ್ಕಳ ಆಹಾರ ಕ್ರಮದ ಮೇಲೆ ಪರಿಣಾಮ ಬೀರಬಹುದು ಎಚ್ಚರ..!

ದಿನೇ ದಿನೇ ಮಾರುಕಟ್ಟೆಗೆ ಕಲರ್​ಫುಡ್​ ಆಹಾರ ಪದಾರ್ಥಗಳು ಲಗ್ಗೆಯಿಡುತ್ತಿರುತ್ತವೆ. ಸಮಯದ ಅಭಾವ, ಕೆಲಸದ ಒತ್ತಡದಿಂದ ಮನೆಯಲ್ಲಿ ಅಡುಗೆ ಮಾಡದೇ ಹೊರಗಡೆ ಸಿಗುವ ಆಹಾರವನ್ನ ತಿನ್ನುತ್ತೇವೆ. ಇನ್ನು ಕೆಲವೊಮ್ಮೆ ಆನ್​ಲೈಸ್​ ಮೂಲಕ ಆರ್ಡರ್​ ಮಾಡಿ ಊಟ ತರಿಸಿಕೊಳ್ಳುತ್ತೇವೆ. ಇನ್ನು  ಫುಡ್​ಗಳು ಇನ್ನಷ್ಟು ಕಲರ್​ಫುಲ್​ ಮಾಡಲು ಜಾಹಿರಾತು ಸಂಸ್ಥೆಗಳು ಏನೇನೋ ಸರ್ಕಸ್​ ಮಾಡುತ್ತವೆ. ಕೆಲವೊಮ್ಮೆ ಅನ್​ಹೆಲ್ದಿ ಫುಡ್​ಗಳನ್ನ ಆರೋಗ್ಯವಾಗಿದೆ ಎಂದು ಬಿಂಬಿಸುವ ಪ್ರಯತ್ನಗಳು ನಡೆಯಬಹುದು. ಇಂತಹ ಜಾಹೀರಾತುಳು ದೊಡ್ಡವರಿಗಿಂತ ಚಿಕ್ಕ ಮಕ್ಕಳ ಮೇಲೆ ಹೆಚ್ಚು ಪರಿಣಾಮವನ್ನ ಬೀರುತ್ತದೆ.

ಇತ್ತೀಚಿಗೆ ನಡೆಸಲಾದ ಒಂದು ಸಂಶೋಧನೆಯ ಪ್ರಕಾರ ಸಾಮಾಜಿಕ ಜಾಲತಾಣಗಳು, ಮಕ್ಕಳು ಸೇವಿಸುವ ಆಹಾರದ ಆಯ್ಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
ಪೀಡಿಯಾಟ್ರಿಕ್ಸ್​ ಎಂಬ ಮ್ಯಾಗಜೀನ್​​ಲ್ಲಿ ಪ್ರಕಟವಾದ, ಲಿವರ್​ಪೂಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವ (ಬಿತ್ತರಿಸಿಲಾಗುವ) ಅರ್ಡ್ವಟೈಸಮೆಂಟ್​ಗಳನ್ನ ನೋಡಿದ ನಂತರ ಪ್ರಭಾವಕ್ಕೆ ಒಳಗಾಗಿ ಮಕ್ಕಳು, ಅನಾರೋಗ್ಯಕರ ಆಹಾರವನ್ನ ಸೇವಿಸುವ ಅಭ್ಯಾಸ ಮಾಡಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.

ಆಫ್​ಕಾಮ್​ ವರದಿಯೊಂದರ ಪ್ರಕಾರ ಯುನೈಟೆಡ್​ ಕಿಂಗ್​ಡಮ್​ನಲ್ಲಿ, ಹಿಂದೆಂದಿಗಿಂತಲೂ ಈಗಿನ ಕಾಲದ ಮಕ್ಕಳು ಹಲವಾರು ಸಾಮಾಜಿಕ ಜಾಲತಾಣಗಳನ್ನ ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು 8ರಿಂದ 10ವರ್ಷದೊಳಗಿನ ಮಕ್ಕಳು ಶೇಕಡಾ 93ರಷ್ಟು ಮಕ್ಕಳು ಇಂರ್ಟನೆಟ್​ ಅನ್ನ ಬಳಸುತ್ತಾರೆ. ಅವರಲ್ಲಿ ಶೇ 77ರಷ್ಟು ಮಕ್ಕಳು ಯ್ಯೂಟ್ಯೂಬ್​ ಬಳಸುತ್ತಾರೆ. ಇನ್ನು ಉಳಿದ ಶೇ18ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳ ಆಕೌಂಟ್​ಗಳನ್ನ ಹೊಂದಿದ್ದಾರೆ. ಇನ್ನು 12ರಿಂದ 15 ವಯಸ್ಸಿನ ಮಕ್ಕಳು ಶೇಕಡಾ 99ರಷ್ಟು ಮಕ್ಕಳು ಇಂರ್ಟನೆಟ್​ ಬಳಸುತ್ತಾರೆ. ಇವರಲ್ಲಿ ಶೇ89ರಷ್ಟು ಮಕ್ಕಳು ಯ್ಯೂಟ್ಯೂಬ್ ನೋಡುತ್ತಾರೆ.
ಯ್ಯೂಟ್ಯೂಬ್​ ವ್ಲಾಗರ್ಸ್ (ಯ್ಯೂಟ್ಯೂಬ್ ಬ್ಲಾಗ್​ ವಿಡಿಯೋಗಳನ್ನ ಮಾಡುವವರು)

ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಫಾಲೋರ್ವಸ್ ಇರುವ ಯ್ಯೂಟ್ಯೂಬ್​ ವ್ಲಾಗರ್ಸ್​ಗಳ ಇನ್​​ಸ್ಟಾಗ್ರಾಮ್​ ಫೋಟೋಗಳನ್ನ ಅನೇಕ ಮಕ್ಕಳು ಫಾಲೋ ಮಾಡುತ್ತಾರೆ. ಅವರು ಇಂತಹ 176 ಮಕ್ಕಳ ಗ್ರೂಪ್​ ಅನ್ನ ಮೂರು ಭಾಗಗಳಾಗಿ ವಿಂಗಡಿಸಿ, ಒಂದು ಗುಂಪಿಗೆ ಯ್ಯೂಟ್ಯೂಬ್​ ವ್ಲಾಗರ್ಸ್​ಗಳ ಇನ್​​ಸ್ಟಾಗ್ರಾಮ್ ಅಕೌಂಟ್​ನಲ್ಲಿರುವ ಅನ್​ಹೆಲ್ತಿ ಸ್ನ್ಯಾಕ್ಸ್​, ಫೋಟೋಸ್​ಗಳನ್ನ ತೋರಿಸಲಾಯಿತು. ಇನ್ನೊಂದು ಗುಂಪಿಗೆ ವ್ಲಾಗರ್ಸ್​ಗಳ ಇನ್​​ಸ್ಟಾಗ್ರಾಮ್ ಅಕೌಂಟ್​ನಲ್ಲಿರುವ ​ಹೆಲ್ತಿ ಸ್ನ್ಯಾಕ್ಸ್​, ಫೋಟೋಸ್​ ತೋರಿಸಲಾಯಿತು. ಮತ್ತೊಂದು ಗುಂಪು ಮಕ್ಕಳಿಗೆ ಯ್ಯೂಟ್ಯೂಬ್​ ವ್ಲಾರ್ಗಸ್​ ಅಹಾರವಲ್ಲದೇ ಇತರೆ ವಸ್ತುಗಳೊಂದಿಗೆ ಇರುವ ಫೋಟೊಗಳನ್ನ ನೋಡಿಸಲಾಯಿತು. ನಂತರ ಮಕ್ಕಳ ಆಹಾರ ಅಭ್ಯಾಸವನ್ನ ಅಂದಾಜು ಮಾಡಲಾಗಿದ್ದು, ಶೇಕಡವಾರು ಮಕ್ಕಳು ಜಾಹಿರಾತಿಗೆ ಪ್ರಭಾವಿತರಾಗಿ ಅನ್​ಹೆಲ್ದಿ ಸ್ನಾಕ್ಸ್​ಗಳನ್ನ ಸೇವಿಸುತ್ತಾರೆ ಎಂದು ಧೃಡಪಡಿಸಲಾಯಿತು.