ಮಲಗಿದ್ದ ನಾಯಿಯನ್ನು ಜೀವಂತ ಸಮಾಧಿ ಮಾಡಿದ ಪಾಪಿಗಳು..!

ಆಗ್ರಾ: ರಸ್ತೆ ಕಾಮಗಾರಿ ವೇಳೆ ನಾಯಿಯೊಂದರ ಮೇಲೆ ಡಾಂಬರೀಕರಣ ನಡೆಸಿ ಜೀವಂತ ಸಮಾಧಿ ಮಾಡಿರುವ ಘಟನೆ ಉತ್ತರ ಪ್ರದೇಶದ ಪತ್ತೇಹಾಬಾದ್​​ನಲ್ಲಿ ನಡೆದಿದೆ. ರಸ್ತೆ ಕಾಮಗಾರಿ ನಡೀತಿದ್ದ ರಸ್ತೆಯ ಪಕ್ಕದಲ್ಲಿ ನಾಯಿಯೊಂದು ನಿದ್ರೆ ಮಾಡುತ್ತಿತ್ತು. ಈ ಮೂಕ ಪ್ರಾಣಿಗಳ ಮೇಲೆ ಡಾಂಬರೀಕರಣ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಡಾಂಬರೀಕರಣ ಕಾಮಗಾರಿ ನಡೀತಿತ್ತು. ರಾತ್ರಿವೇಳೆ ಮಲಗಿದ್ದ ಬೀದಿ ನಾಯಿ ಮೇಲೆ ಕೆಲಸಗಾರರು ಡಾಂಬರೀಕರಣ ಮಾಡಿಬಿಟ್ಟಿದ್ದಾರೆ. ಮರುದಿನ ಬೆಳಗ್ಗೆ ಸ್ಥಳೀಯರು ನಾಯಿಯ ಕಳೆಬರಹವನ್ನು ನೋಡಿ ದಂಗಾಗಿದ್ದಾರೆ. ಅಲ್ಲದೇ ಆಕ್ರೋಶಗೊಂಡ ಸಾರ್ವಜನಿಕರು ಡಾಂಬರೀಕರಣ ಮಾಡಿಸುತ್ತಿದ್ದ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ನಾಯಿಯನ್ನು ಜೀವಂತವಾಗಿ ಸಮಾಧಿ ಮಾಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾರೀ ಆಕ್ರೋಶ ವ್ಯಕ್ತವಾಗಿದೆ. ಇನ್ನು ಅನಿಲ್ ತಿವಾರಿ ಅನ್ನೋರು ವಿಡಿಯೋ ಒಂದನ್ನು ಟ್ವೀಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv