ನಾವು ಅಭಿವೃದ್ಧಿ ಮುಂದಿಟ್ಟು ಮತ ಕೇಳಿದ್ರೆ, ಬಿಜೆಪಿಯವ್ರು ಮೋದಿಗೆ ಮತ ಕೊಡಿ ಅಂತಿದ್ದಾರೆ: ಡಿಸಿಎಂ

ಹಾಸನ: ಈ ಚುನಾವಣೆಯಲ್ಲಿ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಪರ ಜನರ ತೀರ್ಪು ಬರಲಿದೆ. ಬಿಜೆಪಿ ದಾರಿ ಹೊರತುಪಡಿಸಿ ಫಲಿತಾಂಶ ಹೊರಬೀಳಲಿದೆ  ಅಂತಾ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ  ಮಾಧ್ಯಮದವರೊಂದಿಗೆ  ಮಾತನಾಡಿದ ಅವರು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ನಿರಾಯಾಸವಾಗಿ ಗೆಲ್ಲಲಿದ್ದಾರೆ. ನಾವು ಅಭಿವೃದ್ಧಿ ಮುಂದಿಟ್ಟು ಮತ ಕೇಳಿದ್ರೆ, ಬಿಜೆಪಿಯವರು ಕೇವಲ ಮೋದಿಗೆ ಮತ ಕೊಡಿ ಅಂತಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖಂಡರಿಗೆ ಪರಮೇಶ್ವರ್​ ಟಾಂಗ್ ಕೊಟ್ಟರು. ಸಮ್ಮಿಶ್ರ ಸರ್ಕಾರ ಪರ್ಸಂಟೇಜ್ ಸರ್ಕಾರ ಎಂದು ಮೋದಿ ಟೀಕೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಕಮೀಷನ್ ತಗೊಂಡಿದ್ರೆ, ಸಾಬೀತುಪಡಿಸಿ ಇಲ್ಲವಾದರೆ ಆಧಾರರಹಿತವಾಗಿ ಮಾತಾಡೋದು ಅಪರಾಧ ಎಂದರು. ಸೇನೆ ವಿಷಯ ರಾಜಕೀಯಕ್ಕೆ ಬಳಸಬಾರದು ಎಂದಿದ್ದರೂ, ಪ್ರಧಾನಿ ಮುಂದುವರಿಸಿದ್ದಾರೆಂದು ಪ್ರಧಾನಿ ವಿರುದ್ಧ ಡಿಸಿಎಂ ತಮ್ಮ ಆಕ್ರೋಶ ಹೊರಹಾಕಿದ್ರು.

ಇನ್ನು ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ಸಚಿವ ಡಿ.ಕೆ ಶಿವಕುಮಾರ್​ ಹಾಗೂ ಎಂ.ಬಿ ಪಾಟೀಲ್​ ನಡುವೆ ವಾಕ್ಸಮರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಅವರ ವೈಯಕ್ತಿಕ ವಿಚಾರ, ಡ್ಯಾಮೇಜ್ ಆದ್ರೆ ಕಂಟ್ರೋಲ್ ಮಾಡಿಕೊಳ್ತೇವೆ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv