ಮೊಟ್ಟೆ ತಿಂದ ಬುಸ್​ ಬುಸ್​ ಆಮೇಲೆ ಉಸ್​ ಉಸ್​…!

ಉಡುಪಿ: ಜಿಲ್ಲೆಯ ಹಾವಂಜೆಯ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆ ಕೊಟ್ಟಿಗೆಗೆ ನುಸುಳಿದ್ದ ನಾಗರಹಾವು ಹೆಂಟೆ(ಕೋಳಿ)ಯನ್ನು ಕೊಂದು, ಆ ಹೆಂಟೆಯ 7 ಮೊಟ್ಟೆಗಳನ್ನು ನುಂಗಿತ್ತು. ಬಳಿಕ ಹಾವು ಮೊಟ್ಟೆಗಳನ್ನ ಹೊರಗೆ ಕಕ್ಕುವ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಹಾವು ಮೊಟ್ಟೆಗಳನ್ನ ನುಂಗಿ ಕೊಟ್ಟಿಗೆಯ ಅಟ್ಟದ ಮೇಲೆ ಬೆಚ್ಚಗೆ ಕುಳಿತಿತ್ತು. ಈ ನಾಗರಹಾವನ್ನು ಕಂಡು ಭಯಭೀತರಾದ ಮನೆಯವರು ಉರಗ ಸಂರಕ್ಷಕ ಗುರುರಾಜ್ ಸನಿಲ್ ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸನಿಲ್ ಹಾವನ್ನು ಕೋಮಲವಾಗಿ ಹಿಡಿದು ಕೆಳಗೆ ತಂದು ಚೀಲಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಅತೀವ ಭಯಗೊಂಡಿದ್ದ ಹಾವು, ನುಂಗಿದ್ದ ಎಲ್ಲ ಮೊಟ್ಟೆಗಳನ್ನು ವಾಂತಿ ಮಾಡಿದೆ. ಬಳಿಕ ಪಲಾಯನ ಮಾಡಲು ಪ್ರಯತ್ನಿಸಿದೆ.

7 ಮೊಟ್ಟೆಯನ್ನು ಹಾವು ಬಾಯಿಂದ ಹೊರಹಾಕುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಉರಗ ಸಂರಕ್ಷಕ ಗುರುರಾಜ್ ಸನಿಲ್ ಹಾವನ್ನು ರಕ್ಷಣೆ ಮಾಡುವುದರ ಜೊತೆಗೆ ಉಪವಾಸ ಕಳುಹಿಸಲಾರೆ ಎಂದುಕೊಂಡು ಮನೆಗೆ ತಂದು ಹೊಟ್ಟೆ ತುಂಬ ಆಹಾರ ನೀಡಿಯೇ ಬಿಡುಗಡೆಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv