ಪೊಲೀಸ್ ಜೀಪ್​ನ ಟೈರ್​ನಲ್ಲಿ ನಾಗರಹಾವು ಪ್ರತ್ಯಕ್ಷ!

ಮೈಸೂರು: ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಪೊಲೀಸ್ ಜೀಪ್​ವೊಂದರ ಟೈರ್​​ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಅಕಾಡೆಮಿ ಡಿವೈಎಸ್‌ಸ್​ಪಿ ಮಾರುತಿ ಅವರಿದ್ದ ಜೀಪ್‌ನಲ್ಲಿ ಹಾವು ಪ್ರತ್ಯಕ್ಷವಾಗಿದೆ. ಅಕಾಡೆಮಿಯ ಆರ್. ಗೇಟ್ ಬಳಿ ಜೀಪ್ ನಿಲ್ಲಿಸಿದ್ದ ವೇಳೆ ಟೈರ್‌ನಲ್ಲಿ ಹಾವು ಸಿಲುಕಿಕೊಂಡಿತ್ತು. ತಕ್ಷಣ ಉರುಗ ತಜ್ಞ ಸ್ನೇಕ್ ಶ್ಯಾಂ ಸ್ಥಳಕ್ಕಾಗಮಿಸಿ, ಟೈರ್‌ನಲ್ಲಿ ಸುತ್ತಿಕೊಂಡಿದ್ದ ಹಾವನ್ನ ಹೊರತೆಗೆದರು. ಈ ವೇಳೆ ಹಾವು ನೋಡಲು ನೂರಾರು ಮಂದಿ ಜಮಾಯಿಸಿದ್ದರು.

Follow us on: 

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv