ಮೀನಿನ ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಶಿವಮೊಗ್ಗ: ಮೀನಿನ ಬಲೆಯಲ್ಲಿ ಹೆಬ್ಬಾವು ಒಂದು ಸಿಲುಕಿಕೊಂಡು ಹೊರಬರಲಾಗದೇ ಪರದಾಡಿದ ಪ್ರಸಂಗವೊಂದು ನಗರದ ಅಲ್ಕೋಳ ಬಳಿಯ ಕೆರೆಯಲ್ಲಿ ನಡೆದಿದೆ.

ಆಲ್ಕೋಳ ಕೆರೆಯಲ್ಲಿ ಮೀನುಗಾರರು ರಾತ್ರಿ ಬಲೆ ಬಿಟ್ಟಿದ್ದರು. ಹೆಬ್ಬಾವು ಆಹಾರವನ್ನರಸಿ ಕೆರೆಯಲ್ಲಿರುವ ಮೀನುಗಳನ್ನು ತಿನ್ನಲು ಬಂದಿತ್ತು. ಈ ವೇಳೆ ಮೀನಿನ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಬೆಳಗ್ಗೆ ಮೀನುಗಾರರು ಬಲೆಯನ್ನ ಎತ್ತಲು ಹೋದಾಗ ಸುಮಾರು 6 ಅಡಿ ಉದ್ದದ ಹೆಬ್ಬಾವು ಬಲೆಯಲ್ಲಿ ಸಿಲುಕಿ ಹಾಕಿಕೊಂಡಿದ್ದು ಕಂಡಿದೆ. ಕೂಡಲೇ ಸ್ನೇಕ್ ಕಿರಣ್​ಗೆ ಮೀನುಗಾರರು ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹೆಬ್ಬಾವನ್ನ ರಕ್ಷಣೆ ಮಾಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಸ್ನೇಕ್ ಕಿರಣ್ ಮಾತನಾಡಿ, ಕರೆಯಲ್ಲಿ ಮೀನು ಹಿಡಿಯಲು ಬಿಟ್ಟಿದ ಬಲೆಗೆ ಹೆಬ್ಬಾವು ತಗ್ಲಾಕೊಂಡಿದೆ. ಇದು ನನ್ನ ಗಮನಕ್ಕೆ ಬಂತು. ಕೂಡಲೇ ಸ್ಥಳಕ್ಕೆ ಆಗಮಿಸಿ ಹೆಬ್ಬಾವಿಗೆ ಹಿಂಸೆಯನ್ನ ನೀಡದೇ ರಕ್ಷಣೆ ಮಾಡಲಾಗಿದೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv