ವಿವಿ ಪ್ಯಾಟ್ ಒಳಗೆ ಬುಸ್ ಬುಸ್​ ಹಾವು.. ಕೆಲ ಕಾಲ ಮತದಾನ ಸ್ಥಗಿತ..!

ಕಣ್ಣೂರು: ಲೋಕಸಭೆ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದೆ. ಮತದಾರ ಕೂಡ ಬೇಗ ಬೇಗ ವೋಟ್​ ಮಾಡಿ ಇವತ್ತಿನ ಕೆಲಸ ಮುಗಿಸಿಕೊಳ್ಳೋಣ ಅಂತಾ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಆದ್ರೆ, ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕೈ ಬೂತ್​ನಲ್ಲಿ ಹಾವೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿತು. ವಿವಿ ಪ್ಯಾಟ್​​​ನ ಒಳಗೆ ಹಾವನ್ನ ನೋಡಿದ ಮತದಾರ ಹಾಗೂ ಚುನಾವಣಾಧಿಕಾರಿ ಹೌಹಾರಿದ್ರು. ಅಲ್ಲದೇ ಹಾವನ್ನ ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡುವ ತನಕ ಮತದಾನವನ್ನ ಸ್ಥಗಿತಗೊಳಿಸಲಾಯ್ತು. ನಂತರ ಚುನಾವಣಾಧಿಕಾರಿಗಳು, ಮತದಾರರು ನಿಟ್ಟುಸಿರು ಬಿಟ್ಟು ವೋಟಿಂಗ್ ಪ್ರಕ್ರಿಯೆಯನ್ನ ಮುಂದುವರಿಸಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv