ಅಥಿತಿಗೃಹಕ್ಕೆ ಆಗಮಿಸಿದ ಅಥಿತಿ ಕಂಡು ಗಾಬರಿಯಾದ ನೌಕರರು..!

ಮೈಸೂರು: ನಗರದ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅಥಿತಿಗೃಹದಲ್ಲಿ ಕೆರೆ ಹಾವು ಪ್ರತ್ಯಕ್ಷವಾಗಿದೆ. ಅತಿಥಿಗೃಹದ ಮೇಲ್ಛಾವಣಿಯಲ್ಲಿ ಹಾವು ಅವಿತು ಕುಳಿತಿತ್ತು. ಅಥಿತಿಗೃಹಕ್ಕೆ ಬಂದ ಹಾವನ್ನು ನೋಡಿ ನೌಕರರು ಗಾಬರಿಯಾದ್ರು. ಈ ವೇಳೆ ಸ್ಥಳಕ್ಕಾಗಮಿಸಿದ ಸ್ನೇಕ್ ಕೆಂಪರಾಜು, ಹಾವು ಹಿಡಿಯುವಲ್ಲಿ ಯಶಸ್ವಿಯಾದ್ರು.