ನಾಗರಹಾವಿನ ಬಾಯಿಂದ ಹೊರಬಂತು ಕೋಳಿ ಮೊಟ್ಟೆ..!

ಚಿಕ್ಕಮಗಳೂರು: ನಾಲ್ಕು ಕೋಳಿಮೊಟ್ಟೆಗಳು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ, ಯಾಕಾದ್ರೂ ಮೊಟ್ಟೆ ನುಂಗಿದೆನೋ ಅಂತಾ ಹಾವೊಂದು ಒದ್ದಾಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್‌ ಸಮೀಪದ ಚೇಗು ಗ್ರಾಮದ ಹರೀಶ್ ಎಂಬವವರ ಮನೆಯ ಬಳಿ ನಾಗರಹಾವೊಂದು ಬೆಳಗ್ಗೆ ನಾಗರಹಾವೊಂದು ಕಾಣಿಸಿಕೊಂಡಿತ್ತು. ಅಲ್ಲದೇ ಮನೆಯಲ್ಲಿ ಸಾಕಿದ್ದ ಕೋಳಿಯನ್ನ ಸಾಯಿಸಿದೆ. ಅಲ್ಲದೇ ಕೋಳಿಯ ನಾಲ್ಕು ಮೊಟ್ಟೆಗಳನ್ನ ಹಾವು ನುಂಗಿತ್ತು.ಆದರೆ ಅದನ್ನು ಜೀರ್ಣಿಸಿಕೊಳ್ಳಲು ಮಾತ್ರ ಹಾವಿಗೆ ಸಾಧ್ಯವಾಗಲಿಲ್ಲ.

ಮೊಟ್ಟೆ ಹಾವಿನ ಹೊಟ್ಟೆ ಸೇರುವ ಬದಲು ಹಾವಿನ ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಿತ್ತು. ಹೀಗಾಗಿ ಮನೆಯ ಅಡುಗೆ ಕೋಣೆಯಲ್ಲಿಯೇ ಹಾವು ನರಳಾಡುತ್ತಿತ್ತು. ತಕ್ಷಣ ಹರೀಶ್​, ಹಾವು ಹಿಡಿಯುವ ಆರೀಫ್​ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ನಾಗರಹಾವನ್ನ ಹಿಡಿಯುತ್ತಿದ್ದ ವೇಳೆ, ಹಾವು ನಾಲ್ಕು ಮೊಟ್ಟೆಗಳನ್ನು ಹೊರಕ್ಕುಗುಳಿದೆ. ಬಳಿಕ ಹಾವನ್ನು ಹಿಡಿದ ಆರೀಫ್​ ಅದನ್ನು ಚಾರ್ಮಾಡಿ ಘಾಟ್​ನಲ್ಲಿ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *