ರೈಲು ಹತ್ತಲು ಹೋಗಿ ಕಾಲು ಕಟ್‌..!

ಯಾದಗಿರಿ: ಸೀಟು ಸಿಗಲ್ಲ ಅಂತ ಅವಸರದಿಂದ ರೈಲು ಹತ್ತಬೇಕು ಎಂದು ದೌಡಾಯಿಸಿದ ವ್ಯಕ್ತಿಯೊಬ್ಬರು ಕಾಲು ಕಳೆದುಕೊಂಡ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಿನ್ನೆ ರಾತ್ರಿ 11:30ರ ವೇಳೆಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಗುಲರ್ಬಗಾ ಜಿಲ್ಲೆಯ ಅಫ್ಜಲ್‌ ಪೂರ ತಾಲೂಕಿನ ಅವರಂಗ ಗ್ರಾಮದ ಶರಣು ರೆಡ್ಡಿ ಎಂದು ಗುರುತಿಸಲಾಗಿದೆ. ಉದ್ಯಾನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಬೇಕಿದ್ದ ಈತ, ಕಾಲು ಕಳೆದುಕೊಂಡಿದ್ದಾನೆ. ಸದ್ಯ ಶರಣು ರೆಡ್ಡಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.