ಸಿದ್ದಗಂಗಾ ಮಠಕ್ಕೆ ಶಿವಣ್ಣ ಭೇಟಿ, ಶ್ರೀಗಳ ಗದ್ದುಗೆಗೆ ತಲೆಬಾಗಿ ನಮನ

ತುಮಕೂರು : ಶ್ರೀಗಳ ಬಗ್ಗೆ ಮಾತನಾಡಲು ನಾನೆಷ್ಟು ದೊಡ್ಡವನು ಎಂದು ನನಗೆ ಗೊತ್ತಿಲ್ಲ. ಆದ್ರೆ, ಅವರನ್ನ ನೋಡಿದರೇನೆ ನನಗೆ ವಿಶಿಷ್ಟ ಭಾವ ಮೂಡುತ್ತಿತ್ತು. ತುಂಬಾ ಪರಿಚಯದವರ ರೀತಿಯಲ್ಲಿ ನಮ್ಮನ್ನ ಶ್ರೀಗಳು ಮಾತನಾಡಿಸುತ್ತಿದ್ರು. ಟಗರು ಸಿನಿಮಾದಲ್ಲಿ ಶ್ರೀಗಳ ಆಶೀರ್ವಾದ ಪಡೆಯುವ ಸೀನ್ ಇತ್ತು. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಎಂದು ಶ್ರೀಗಳ ಗದ್ದುಗೆಗೆ ನಮಿಸಿದ ಬಳಿಕ ನಟ ಶಿವರಾಜ್ ಕುಮಾರ್ ಶ್ರೀಗಳ ಬಗ್ಗೆ ಮಾತನಾಡಿದ್ದಾರೆ.  ಇದೇ ವೇಳೆ ಶಿವಣ್ಣ ಶ್ರಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು,  ಶ್ರೀಗಳ  ಸೇವೆಯನ್ನ ಯಾರು ಮೀರಿಸೋಕ್ಕಾಗುವುದಿಲ್ಲ. ನನಗೆ ಸಾಧ್ಯವಾದಾಗಲೆಲ್ಲ ಮಠಕ್ಕೆ ಬರ್ತಿರ್ತೀನಿ. ಶ್ರೀಗಳು ಇಂದಿಗೂ ಅನೇಕ ರೂಪದಲ್ಲಿ ಮಠದಲ್ಲಿದ್ದಾರೆ. ಕಲ್ಲಿನ ರೂಪದಲ್ಲಿ, ಮಠದ ವಿದ್ಯಾರ್ಥಿಗಳ, ಜನರ ಹೃದಯದಲ್ಲಿ , ಸೇವೆಯ ರೂಪದಲ್ಲಿ, ಅವರು ನಮ್ಮೊಂದಿಗಿದ್ದಾರೆ ಎಂದರು.  ಅಲ್ಲದೇ, ಶ್ರೀಗಳು ಲಿಂಗೈಕ್ಯರಾದಾಗ ನಾನು ಹೊರದೇಶದಲ್ಲಿದ್ದೆ. ಅವರ ಸಾವಿನ ಸುದ್ದಿ ನೋವು ತಂದಿದೆ, ಇನ್ನೂ ನೂರು ಕಾಲ ಶ್ರೀಗಳು ಇರಬೇಕು ಅನಿಸಿತ್ತು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ರು.

ಶ್ರೀಗಳಂತಹ ವ್ಯಕ್ತಿಗಳು ಇದ್ರೇನೆ ದೇಶದಲ್ಲಿ ಮಳೆ ಬೆಳೆ ಚೆನ್ನಾಗಾಗುತ್ತೆ
ಅವರು ಮಹಾಪುರುಷ. ಶ್ರೀಗಳಿದ್ದಾಗ ಮಠ ಹೇಗೆ ನಡೆಯುತ್ತಿತ್ತೊ ಮುಂದೆಯೂ ಹಾಗೇ ನಡೆಯಬೇಕು. ಶ್ರೀಗಳ ಸೇವೆ, ಆದರ್ಶಗಳು ಎಲ್ಲರಿಗೂ ಬರಲಿ. ಸಿದ್ಧಲಿಂಗ ಶ್ರೀಗಳೂ ಕೂಡ ಹಿರಿಯ ಶ್ರೀಗಳಂತೆಯೇ ಮಠವನ್ನ ನಡೆಸಲಿ. ಮಠದ ಕಾಯಕ ಹೀಗೇ ಮುಂದುವರಿಯಬೇಕು. ಕಾಯಕಕ್ಕೆ ನಾವೂ ಕೈಜೋಡಿಸುತ್ತೇವೆ ಎಂದು ಡಾ.ಶಿವರಾಜ್​​ ಕುಮಾರ್​​​ ತುಮಕೂರಿನಲ್ಲಿ ಮಾತನಾಡಿದ್ರು.

 


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv