ಆಡಿಯೋ ವಾರ್, ತನಿಖೆಗೆ SIT ತಂಡ ರಚಿಸಲು ಸಿಎಂಗೆ ಸೂಚನೆ

ಬೆಂಗಳೂರು: ಆಪರೇಷನ್​ ಆಡಿಯೋ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸುವಂತೆ ಸ್ಪೀಕರ್ ರಮೇಶ್​ ಕುಮಾರ್​, ಸಿಎಂ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಇಂದು, ಸಿಎಂ ಕುಮಾರಸ್ವಾಮಿ ಫೆಬ್ರವರಿ 8 ರಂದು ರಿಲೀಸ್​ ಮಾಡಿದ್ದ ಆಡಿಯೋ ಕುರಿತು ಚರ್ಚೆ ನಡೆಯಿತು. ಸ್ಪೀಕರ್ ರಮೇಶ್​ ಕುಮಾರ್ ಆರಂಭದಲ್ಲಿ ತಾವೇ, ಆಡಿಯೋ ಬಗ್ಗೆ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಸುದೀರ್ಘ ಚರ್ಚೆ ಬಳಿಕ, ಸ್ಪೀಕರ್​ ರಮೇಶ್​ ಕುಮಾರ್, ಆಡಿಯೋ ಸಂಬಂಧ ಸೂಕ್ತ ತನಿಖೆ ಆಗುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ನಾನು ಸಿಎಂಗೆ ಸೂಚನೆ ನೀಡುತ್ತೇನೆ. ವಿಶೇಷ ತಂಡ ರಚಿಸಿ, 15 ದಿನದೊಳಗೆ ವರದಿ ನೀಡಿ. ಆಡಿಯೋದಲ್ಲಿ ನನ್ನ ಹೆಸರ ಕೂಡ ಕೇಳಿ ಬಂದಿದೆ. ನನಗೆ ರಿಲೀಫ್​ ಕೊಡಿ. ಸಮಗ್ರ ತನಿಖೆ ನಡೆಸಿ ಆಡಿಯೋದಲ್ಲಿ ಯಾಱರು ಇದ್ದಾರೆ ಅನ್ನೋದರ ಬಗ್ಗೆ ತನಿಖೆ ಆಗಲಿ ಅಂತಾ ಸೂಚನೆ ನೀಡಿದರು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv