ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣ; ಮುದುವರೆದ ಎಸ್​ಐಟಿ ತನಿಖೆ

ಬೆಂಗಳೂರು: ಎಸ್​ಐಟಿ ತಂಡ ವಿಚಾರವಾದಿ ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿದೆ. ಧಾರವಾಡದ ಕಲಬುರ್ಗಿ ನಿವಾಸಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕುಟುಂಬ ಸದಸ್ಯರ ಹೇಳಿಕೆಗಳನ್ನು ಸಂಗ್ರಹಿಸಿದರು. ಜೊತೆಗೆ ಘಟನೆ‌ ನಡೆದ ದಿನ ಏನೆಲ್ಲಾ ಆಯ್ತು ಎಂದು ಸಂಬಂಧಿಕರ ಹೇಳಿಕೆಯನ್ನೂ ದಾಖಲಿಸಿಕೊಂಡರು. ಪ್ರಕರಣ ಸಂಬಂಧ ಈಗಾಗಲೇ ಎಸ್​ಐಟಿ ತಂಡ  ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದ ಕಿಂಗ್ ಪಿನ್​ಗಳಾದ ಅಮಿತ್ ಕಾಳೆ, ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್, ಸೂರ್ಯವಂಶಿಯನ್ನ ವಶಕ್ಕೆ ಪಡೆದಿದೆ.

2015 ಆಗಸ್ಟ್ 30ರಂದು ವಿಚಾರವಾದಿ ಕಲ್ಬುರ್ಗಿ ಹತ್ಯೆಯಾಗಿತ್ತು. ಮನೆಯ ಡೋರ್ ಬಡೆದಿದ್ದ ಇಬ್ಬರು ಆರೋಪಿಗಳು, ಕಲಬುರ್ಗಿಯವರನ್ನು ಭೇಮಾಡಲು ಬಂದಿದ್ದೇವೆ ಅಂತಾ ಹೇಳಿದ್ರು. ಈ ವೇಳೆ, ಕಲಬುರ್ಗಿ ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆ ಅವರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ ಈ ಹತ್ಯೆಗೆ ಅಮಿತ್ ಕಾಳೆ ಪ್ಲ್ಯಾನಿಂಗ್ ರಚಿಸಿಲ್ಲ ಅಂತಾ ಎಸ್​ಐಟಿ ತಂಡ ಅನುಮಾನ ವ್ಯಕ್ತಪಡಿಸಿದೆ. ಹೀಗಾಗಿ ಅಧಿಕಾರಿಗಳು ಆರೋಪಿಗಳ ಹಾಗೂ ಕಲಬುರ್ಗಿ ಸಂಬಂಧಿಕರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.