ಬೈಕ್​ನಿಂದ ಕೃಷ್ಣಾ ನದಿಗೆ ಪುಟಿದ ಮಗಳು, ಮಗಳಿಗಾಗಿ ನದಿಗೆ ಹಾರಿದ ತಂದೆ ಸಾವು

ಬಾಗಲಕೋಟೆ: ಬೈಕ್ ನಿಂದ ಪುಟಿದು ನದಿಗೆ ಬಿದ್ದ ಬಾಲಕಿ, ಬಾಲಕಿಯನ್ನು ಕಾಪಾಡಲು ಹೋದ ತಂದೆ ಇಬ್ಬರೂ ಸಾವನ್ನಪಿದ ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ ನಡೆದಿದೆ. ಆನಮ್ (4)ಬಾಲಕಿ, ತಂದೆ ದಸ್ತಗೀರ್ ಗೌಂಡಿ (29) ಮೃತ ದುರ್ದೈವಿಗಳು.
ಚಿಕ್ಕ ಗಲಗಲಿ ಗ್ರಾಮದ ಬಾಲವಾಡಿಯಿಂದ ಮಗಳನ್ನು ಮರಳಿ ಮನೆಗೆ ಕರೆತರುವಾಗ ಗಲಗಲಿ ರಸ್ತೆ ಬಳಿ ಇರುವ ಕೃಷ್ಣಾ ನದಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದೆ. ಮಗಳು ಬಿದ್ದಿರುವುದನ್ನು ಗಮನಿಸಿದ ದಸ್ತಗೀರ್ ಗೌಂಡಿ ಮಗಳನ್ನು ಕಾಪಾಡಲು ನೀರಿಗೆ ಹಾರಿದ್ದಾರೆ. ದುರಾದೃಷ್ಟವಶಾತ್​ ಇಬ್ಬರು ಕೂಡಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ರು. ಮಗಳ ಮೃತ ದೇಹ ಪತ್ತೆಯಾಗಿದ್ದು ತಂದೆ ದಸ್ತಗೀರ್ ಗೌಂಡಿ ಶವಕ್ಕಾಗಿ ಸ್ಥಳೀಯ ಈಜುಗಾರಾರು ಹುಡುಕಾಟ ನಡೆಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv