‘ಸಿಂಗ’ ಸಿಂಗಲ್ಲಾಗಿ ವೇಯ್ಟಿಂಗ್​​.. ಹುಷಾರಾಗಿರಿ..!

ವಿಜಯ್ ಕಿರಣ್ ನಿರ್ದೇಶನ ಚಿರಂಜೀವಿ ಸರ್ಜಾ ನಟನೆಯ ಸಿಂಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೊದಲು ಪೋಸ್ಟರ್‌ನಲ್ಲಿ ಘರ್ಜಿಸ್ತಿರೋ ಸಿಂಹ ಇತ್ತು. ಈಗ ಸಿಂಹದಂತೇ ಗಂಭೀರನಡಿಗೆಯಲ್ಲಿ ನಡೆದು ಬರ್ತಿದಾರೆ ಚಿರಂಜೀವಿ ಸರ್ಜಾ. ಚಿತ್ರದ ಹೆಸರೇ ಸಿಂಗ ಅಂತಿರುವಾಗ ಚಿರು ಲುಕ್‌,ಮ್ಯಾನರಿಸಂ ಕೂಡ ಅಷ್ಟೇ ಖಡಕ್‌ ಆಗಿದೆ. ಚಿತ್ರದ ಮತ್ತೊಂದು ಪೋಸ್ಟರ್ ಕೂಡ ರಿಲೀಸ್ ಆಗಿದ್ದು ಇದ್ರಲ್ಲಿ ಚಿರು ಕಬ್ಬು ತಿನ್ನುತ್ತಾ ನಾಚಿಕೊಂಡು ಹೋಗ್ತಿರೋ ಅದಿತಿ ಹಿಂದೇನೆ ಕಳ್ಳಕೃಷ್ಣನಂತೆ ನಡೆದು ಹೋಗ್ತಿದ್ದಾರೆ. ಸದ್ಯ ಸಿಂಗ ಚಿತ್ರದ ರೋಮ್ಯಾಂಟಿಕ್ ಸನ್ನಿವೇಶಗಳನ್ನ ಮೈಸೂರಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಸಿಂಗ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಉದಯ್ ಮೆಹ್ತಾ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಚಿತ್ರದಲ್ಲಿ ರವಿಶಂಕರ್, ತಾರಾ, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮವಿಶ್ ಸಂಗೀತ, ಕೆ.ರವಿವರ್ಮಾ, ಪಳನಿರಾಜ್ ಸಾಹಸ,ಗಣೇಶ್ ಅವರ ಸಂಕಲನವಿದೆ.