322 ಪ್ರಯಾಣಿಕರು, 14 ಸಿಬ್ಬಂದಿ ಮತ್ತು ನಾನ್​ಸ್ಟಾಪ್ 19 ಗಂಟೆ ಪಯಣ..!

ಸಿಂಗಾಪುರ: ಜಗತ್ತಿನಲ್ಲಿ ಮೊದಲ ಬಾರಿಗೆ ಅತ್ಯಂತ ದೀರ್ಘ ಕಾಲದ ವಿಮಾನ ಪ್ರಯಾಣ ಮಾಡಲು 322 ಪ್ರಯಾಣಿಕರು ಸಜ್ಜಾಗಿದ್ದಾರೆ..! ಇವರ ಜೊತೆಗೆ 14 ಮಂದಿ ವಿಮಾನ ಸಿಬ್ಬಂದಿಯೂ ಇರ್ತಾರೆ ಅನ್ನಿ! ಇವರೆಲ್ಲ ಬರೋಬ್ಬರಿ 19 ಗಂಟೆ ಕಾಲ ಪ್ರಯಾಣ ಮಾಡಲಿದ್ದಾರೆ.

ಸಿಂಗಾಪುರ್​ ಏರ್​ಲೈಲ್ಸ್​ಗೆ ಸೇರಿದ ಎಸ್​ಕ್ಯು22 ಶ್ರೇಣಿಯ, ಏರ್​​ಬಸ್​ ಎ350-900ಯುಎಲ್​ಆರ್​ ಎಂಬ ಈ ವಿಮಾನವು ಸಿಂಗಾಪುರದಿಂದ ನ್ಯೂಯಾರ್ಕ್​ನತ್ತ  ಇಂದು ಪ್ರಯಾಣ ಮಾಡಲಿದೆ. ಒಟ್ಟು 16,700 ಕಿ.ಮೀ. ದೂರ ಕ್ರಮಿಸಲಿದೆ. ಇಬ್ಬರು ಪೈಲಟ್​​ಗಳು, ವಿಶೇಷ ಕ್ಷೇಮಕರ ಆಹಾರದ ಜೊತೆಗೆ, ನಿರಂತರವಾಗಿ 7 ವಾರಗಳ ಕಾಲ ನೋಡಬಹುದಾದ ವಿಡಿಯೋ ಎಂಟರ್​​ಟೈನ್ಮೆಂಟ್​ ವಿಮಾನದಲ್ಲಿರುತ್ತದೆ.

ಈಗಿರುವ ದೀರ್ಘಾವಧಿ ವಿಮಾನ ಪ್ರಯಾಣವೆಂದ್ರೆ ಆಕ್ಲೆಂಡ್​​ನಿಂದ ದೋಹಾವರೆಗೂ. ಈ ದೂರವನ್ನು ಕ್ರಮಿಸಲು ಖತಾರ್​ ಏರ್​ವೇಸ್​ ಫ್ಲೈಟ್ 921, ಒಟ್ಟು 17 ಗಂಟೆ 40 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿದೆ.

ಈಗಿನಂತೆ ಸುತ್ತಿಬಳಸಿ ಪ್ರಯಾಣ ಮಾಡಿದ್ರೆ ಪ್ರಯಾಣ ವೆಚ್ಚ ಅಧಿಕವಾಗುತ್ತದೆ. ಅದೇ ನೇರ ಆದ್ರೆ ದೀರ್ಘಾವಧಿ ಪ್ರಯಾಣ ಮಾಡುವುದರಿಂದ ವೆಚ್ಚ ಕಡಿಮೆಯಾಗುತ್ತದೆ. ಪ್ರಯಾಣಿಕರೂ ಇದನ್ನು ಇಷ್ಟಪಡುತ್ತಾರೆ. ಇದರೊಂದಿಗೆ, ಅಮೆರಿಕಾಕ್ಕೆ ತಡೆರಹಿತ ವಿಮಾನ ಪ್ರಯಾಣಕ್ಕೆ ಬೇಡಿಕೆ ವೃದ್ಧಿಸುತ್ತದೆ ಎಂದು ವಿಮಾನ ಸಂಸ್ಥೆ ಆಶಿಸಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv