ಕ್ಯಾಲೋರಿಸ್​ ಚಿಂತೆಯೇ ಡೋಟ್​ವರಿ.. ಇಲ್ಲಿದೆ ಸಲ್ಯೂಶನ್​

ಇತ್ತೀಚಿನ ದಿನಗಳಲ್ಲಿ ಹುಟ್ಟೆ ತುಂಬಾ ತಿನ್ನುವುದಕ್ಕೂ ಯೊಚನೆ ಮಾಡಬೇಕು, ಹಾಗಿದೆ ಪರಿಸ್ಥಿತಿ..! ನಾವು ಸ್ವಲ್ಪ ಹೆಚ್ಚು ತಿಂದ್ರು ಕ್ಯಾಲೋರಿಸ್​ ಹೆಚ್ಚಾಗಿ ದಪ್ಪ ಆಗ್​ಬಿಟ್ರೆ​ ಅನ್ನೋ ಭಯ ನಮ್ಮಲ್ಲೆ ಹೆಚ್ಚಾಗಿರುತ್ತೆ. ಸ್ವೀಟ್​ ತಿನ್ನೊ ಹಾಗಿಲ್ಲ. ಹೆಚ್ಚು ಮಸಲಾ ಐಟಮ್ಸ್ ತಿನ್ನೊಹಾಗಿಲ್ಲ, ನೋ ಪಿಜಾ, ನೋ ಬರ್ಗರ್​ ಎಕ್ಸಟ್ರಾ.. ಎಕ್ಸೆಟ್ರಾ.. ನಮ್ಮ ಆರೋಗ್ಯವನ್ನ ಚೆನ್ನಾಗಿ ಇಟ್ಕೋಬೇಕು. ಹೆಲ್ದಿ ಲೈಫ್​ ಲೀಡ್​ ಮಾಡಬೇಕು ಅಂತಾ ನಾವು ಜಿಮ್​. ಯೋಗಾ, ಏರೋಬಿಕ್ಸ್​ ಹೀಗೆ ಏನೇನೋ ವರ್ಕೌಟ್​ಗಳನ್ನ ಮಾಡ್ತೀವಿ.

ಹೆಚ್ಚು ಕಾಲೋರಿಸ್​ ಬರ್ನ್​ ಮಾಡೋಕೆ ಯಾವ ವ್ಯಾಯಾಮಗಳನ್ನ​ ಮಾಡಬೇಕು..?​ ಸೈಕ್ಲಿಂಗ್ ಮತ್ತು ಈಜು ಸೇರಿದಂತೆ ಇನ್ನು ಹಲವು ವ್ಯಾಯಾಮಗಳು ಕ್ಯಾಲೋರಿಸ್​ ಬರ್ನ್​ ಮಾಡಲು ಸಕಕಾರಿ ಎನ್ನಲಾಗಿದೆ. ಹೆಚ್ಚು ಕ್ಯಾಲೋರಿಸ್​ ಬರ್ನ್​ ಮಾಡುವ ಆರು ವ್ಯಾಯಾಮಗಳ ಡಿಟೇಲ್ಸ್​ ಇಲ್ಲಿದೆ ನೋಡಿ.

1. ಈಜು
ಮೊಣಕಾಲು ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚಾಗಿ ಈಜನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹೆಚ್ಚು ಕ್ಯಾಲೋರಿಗಳು ಮತ್ತು ತೂಕವನ್ನ ಕಳೆದುಕೊಳ್ಳುವುದಕ್ಕೆ ಈಜನ್ನ ಅವಲಂಬಿಸುತ್ತಾರೆ. ಅರ್ಧ ಘಂಟೆ ನಿಧಾನವಾಗಿ ಫ್ರೀಸ್ಟೈಲ್ ಲ್ಯಾಪ್ಸ್ ಮಾಡುವುದರಿಂದ ಒಂದೇ ಬಾರಿಗೆ 255 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಬ್ರೆಸ್ಟ್​ ಸ್ಟ್ರೋಕ್​, ಅಥವಾ ಬಟರ್​ ಫ್ಲೈ ಸ್ಟ್ರೋಕ್​ ಮಾಡುವುದರಿಂದ ಅರ್ಧ ಘಂಟೆಯಲ್ಲಿ 400 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.

2. ಏರೋಬಿಕ್ಸ್ ಮತ್ತು ಜುಂಬಾ
ನಿಮಗೆ ಗೊತ್ತಿರುವಂತೆ ಏರೋಬಿಕ್ಸ್​ ಮತ್ತು ಜುಂಬಾ ತೂಕ ಕಡಿಮೆ ಮಾಡಿಕೊಳ್ಳಲು ಪರಿಣಾಮಕಾರಿ ವ್ಯಾಯಾಮವಾಗಿದೆ. ಏರೋಬಿಕ್ಸ್ ತೀವ್ರವಾದ ಜಿಗಿತ ಮತ್ತು ಡ್ಯಾನ್ಸ್​ಅನ್ನ ಒಳಗೊಂಡ ಫಿಟ್ನೆಸ್ ವ್ಯಾಯಾಮವಾಗಿದೆ. ಏರೋಬಿಕ್ಸ್ ಮತ್ತು ಜುಂಬಾ ಡ್ಯಾನ್ಸ್​ ಆಧಾರಿತವಾಗಿರುವುದರಿಂದ, ನಮ್ಮ ದೇಹ ಬಹುಬೇಗ ಬೆವರುವಂತೆ ಮಾಡುತ್ತದೆ. ಅರ್ಧ ಘಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವ್ಯಾಯಾಮಗಳನ್ನ ಮಾಡುವುರಿಂದ 250 ಕ್ಯಾಲೊರಿಗಳನ್ನು ಬರ್ನ್​ ಮಾಡುವಲ್ಲಿ ಸಹಾಯ ಮಾಡುತ್ತದೆ.

3. ರನ್ನಿಂಗ್​ ಮತ್ತು ಸೈಕ್ಲಿಂಗ್
ರನ್ನಿಂಗ್​ ಅಥವಾ ಸೈಕ್ಲಿಂಗ್ ಎರಡು ಕೂಡಾ ಹೆಚ್ಚು ಕ್ಯಾಲೋರಿಗಳನ್ನು ಬರ್ನ್​ ಮಾಡುವಲ್ಲಿ ಸಹಾಯ ಮಾಡುವ ಎರಡು ವ್ಯಾಯಾಮಗಳಾಗಿವೆ. ವೇಗವಾಗಿ ನಡೆಯುವುದು ಮತ್ತು ಓಡುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಫ್ಯಾಟ್​ ಬರ್ನ್​ ಮಾಡಲು ಸಹಾಯವಾಗುತ್ತದೆ. ಜಿಮ್​ನಲ್ಲಿ ಸೈಕ್ಲಿಂಗ್​, ಟ್ರೆಡ್ ಮಿಲ್ ನೀವು ಹೆಚ್ಚು ಬಳಸುತ್ತಿದ್ದರೆ ಹೆಚ್ಚು ಕ್ಯಾಲೋರಿ ಬರ್ನ್​ ಮಾಡಲು ಸಹಕಾರಿ. ಆದರೆ ಎಷ್ಟು ವೇಗದಲ್ಲಿ ನೀವು ವರ್ಕೌಟ್​ ಮಾಡಬೇಕು ಎಂಬುದನ್ನ ಮೊದಲು ಖಚಿತಪಡಿಸಿಕೊಳ್ಳಿ.

4. ಕ್ರಾಸ್ ಫಿಟ್ ವರ್ಕೌಟ್​
ನಿಮ್ಮ ದಿನ ನಿತ್ಯದ ವರ್ಕೌಟ್​ಗಳಲ್ಲಿ ಕ್ರಾಸ್​ ಫಿಟ್​ ವರ್ಕೌಟ್​ ಬಹಳ ಮುಖ್ಯವಾಗಿದೆ. ಈ ವ್ಯಾಯಾಮ ಮಾಡುವುದರಿಂದ ಮಾಕ್ಸಿಮಮ್​ ಕ್ಯಾಲೋರಿಯನ್ನ ಬರ್ನ್​ ಮಾಡಬಹುದು. ಕ್ರಾಸ್​ ಫಿಟ್​ ವರ್ಕೌಟ್​ನಲ್ಲಿ ಏರೋಬಿಕ್ ವ್ಯಾಯಾಮಗಳು ಮತ್ತು ತೂಕ ಎತ್ತುವ ವ್ಯಾಯಾಮಗಳು ಇರುತ್ತದೆ. ಕ್ರಾಸ್ ಫಿಟ್ ತೂಕ ಕಳೆದುಕೊಳ್ಳುವುದಕ್ಕೆ ಹೆಚ್ಚು ಪರಿಣಾಮಕಾರಿ ಫಿಟ್ನೆಸ್ ವರ್ಕೌಟ್​ ಆಗಿದೆ.

5. ಪವರ್ ಯೋಗ
ಸಾಂಪ್ರದಾಯಿಕ ಯೋಗಾಸನಕ್ಕೆ ಹೋಲಿಸಿದ್ರೆ , ಪವರ್​ ಯೋಗ ಬೇಗ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪವರ್ ಯೋಗವು ಹೆಚ್ಚಿನ ಸಂಖ್ಯೆಯ ಯೋಗಾಸನಗಳನ್ನು ವೇಗವಾಗಿ ಮಾಡಬೇಕಾಗುತ್ತದೆ.

 

6. ಮಾರ್ಷಲ್ ಆರ್ಟ್ಸ್
ಇದೊಂದು ಸಾಹಸಿ ಕಲೆಯಾಗಿದ್ದು, ಆತ್ಮ ರಕ್ಷಣೆಗೋಸ್ಕರ ಇದನ್ನ ಹೆಚ್ಚಾಗಿ ಕಲಿಯುತ್ತಾರೆ. ಆದರೆ ಇತ್ತೀಚೆಗೆ ಇದು ಕ್ಯಾಲೋರಿ ಬರ್ನ್​ ಮಾಡುವ ಒಂದು ವ್ಯಾಯಾಮವೂ ಆಗಿದೆ. ಮಾರ್ಷಲ್​ ಆರ್ಟ್ಸ್ ಒಂದು ಶ್ರಮದಾಯಕ ಕಲೆಯಾಗಿದ್ದು, ಹೆಚ್ಚು ಕ್ಯಾಲೋರಿ ಬರ್ನ್​ ಮಾಡಲು ಇದು ಸಹಕಾರಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv

ಕ್ಯಾಲೋರಿಸ್​ ಚಿಂತೆಯೇ ಡೋಟ್​ವರಿ.. ಇಲ್ಲಿದೆ ಸೆಲ್ಯೂಶನ್​