ಹಠಮಾರಿ ಸನ್​ಬರ್ನ್​ ಸಮಸ್ಯೆಗೆ ಸಿಂಪಲ್​ ರೆಮಿಡಿ

ಇನ್ನೇನು ಬೇಸಿಗೆ ಶುರುವಾಗ್ತಾ ಇದೆ. ಬಿಸಿಲಿನ ಬೇಗೆಗೆ ಮನೆ ಬಿಟ್ಟು ಆಚೆ ಬರೋಕೆ ಭಯ ಆಗುತ್ತೆ . ನಾನೆಲ್ಲಿ ಟ್ಯಾನ್​ ಆಗೋಗ್ತಿನೋ, ಎಲ್ಲಿ ಕಪ್ಪು ಆಗೋಗ್ತೀನೋ ಅನ್ನೋದೆ ಟೆನ್ಶನ್. ಅತಿಯಾದ ಸೂರ್ಯನ ಕಿರಣಗಳು ನಮ್ಮ ತ್ವಚೆಯ ಮೇಲೆ ಬಿದ್ದರೆ ಸಾಕು, ಟ್ಯಾನ್​ ಆಗಲು ಶುರುವಾಗುತ್ತೆ. ಹಾಗಾಗಿ ನಾವು ಸನ್​ ಸ್ಕ್ರೀನ್​ ಲೋಷನ್​, ಕೊಬ್ಬರಿ ಎಣ್ಣೆ ಇಂಥವನ್ನ ನಮ್ಮ ತ್ವಚೆಗೆ ಬಳಸುತ್ತೇವೆ. ಆದ್ರೆ ಇಲ್ಲೊಂದಿಷ್ಟು ಮನೆ ಮದ್ದು ಇದೆ. ಇದನ್ನ ನೀವು ಫಾಲೋ ಮಾಡಿದ್ರೆ ಸಾಕು. ನೋ ಸನ್​​ ಟ್ಯಾನ್​ ನಥಿಂಗ್​..!

ತ್ವಚೆಗೆ ಉಂಟಾಗುವ ಸಮಸ್ಯೆಗಳಲ್ಲಿ ಸನ್​ಬರ್ನ್​ ಕೂಡಾ ಒಂದು. ಸನ್​ಬರ್ನ್​​ ನಿಂದ ಮುಕ್ತಿ ಪಡೆಯಲು ಸನ್​ಸ್ಕ್ರೀನ್​ ಲೋಷನ್ ಬಳಸಬೇಕು. ಯಾಕಂದ್ರೆ ಹೆಚ್ಚು ಕಾಲ ನೀವು ಸೂರ್ಯನ ಕಿರಣಗಳಿಗೆ ಮೈ ಒಡ್ಡಿದಾಗ ನಿಮ್ಮ ಚರ್ಮ ಮೆಲನಿನ್ ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಪಿಗ್​ಮೆಂಟೇಷನ್​ ನಿಮ್ಮ ಚರ್ಮದ ಬಣ್ಣವನ್ನ ಗಾಢವಾಗಿಸುತ್ತದೆ ಮತ್ತು ಸೂರ್ಯನ UV ಕಿರಣಗಳ ಹಾನಿಕಾರಕ ಪರಿಣಾಮಗಳ ವಿರುದ್ಧ ಅದನ್ನು ರಕ್ಷಿಸುತ್ತದೆ.

ಚಿಕ್ಕ ಪುಟ್ಟ ಸನ್​ಬರ್ನ್​ಗಳಿಗೆ ಸನ್​ಸ್ಕ್ರೀನ್​ ಬಳಸಿದ್ರೆ ಸಾಕು. ಆದರೆ ಈ ಹಠಮಾರಿ ಸನ್​ಬರ್ನ್ಸ್​ಗಳನ್ನ ಹೇಗಪ್ಪಾ ಹೋಗಲಾಡಿಸೋದು ಅನ್ನೋ ಟೆನ್ಷನ್​ ಇದ್ದೇ ಇರುತ್ತೆ. ಅದಕ್ಕಾಗಿ ಇಲ್ಲಿದೆ ಸಿಂಪಲ್​ ಹೋಮ್​ ರೆಮಿಡೀಸ್​.

1. ಮಜ್ಜಿಗೆ: ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆ್ಯಸಿಡ್​​ ಇರುವುದರಿಂದ ನಿಮ್ಮ ಚರ್ಮದ ಮೇಲಿನ ಎಪಿಡರ್ಮಿಸ್ ಅನ್ನು ನೈಸರ್ಗಿಕವಾಗಿ ಪೋಷಿಸಿ, ಸ್ಕಿನ್​ ಫ್ರೆಶ್​ ಆಗಿರಲು ಸಹಾಯ ಮಾಡುತ್ತದೆ. ಲ್ಯಾಕ್ಟಿಕ್ ಆ್ಯಸಿಡ್​ ಚರ್ಮಕ್ಕೆ ಚಿಕಿತ್ಸೆ ನೀಡಿ ಮೆಲಾನಿನ್​​​​ ಅಂಶವನ್ನ ಕಡಿಮೆ ಮಾಡುತ್ತದೆ. ಚರ್ಮದಲ್ಲಿ ಕೋಲಾಜನ್ ಮಟ್ಟವನ್ನು ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

2. ಅರಿಶಿಣ: ಪ್ರಾಚೀನ ಕಾಲದಿಂದಲೂ, ಅರಿಶಿಣವನ್ನು ಚರ್ಮದ ಟೋನ್ ಸುಧಾರಿಸಲು ಬಳಸಲಾಗುತ್ತದೆ. ಅರಿಶಿಣದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶವು ಮೆಲಾನಿನ್ ಉತ್ಪಾದನೆಯನ್ನು ತಡೆಯುತ್ತದೆ. ಅರಿಶಿಣ ಪುಡಿಗೆ ಮೊಸರು ಮತ್ತು ನೀರನ್ನು ಸೇರಿಸಿ ಟ್ಯಾನ್​ ಆದ ಜಾಗಕ್ಕೆ ಅಪ್ಲೈ ಮಾಡುವುದರಿಂದ ಸನ್​ಟ್ಯಾನ್​ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಅರಿಶಿಣದ ಈ ಮಿಶ್ರಣ ಸೂರ್ಯನ UV ಕಿರಣಗಳ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಮೊಸರಿನ ಮಿಶ್ರಣವನ್ನ ನಿಮ್ಮ ಮುಖಕ್ಕೆ ಹಚ್ಚಿ ಒಣಗಲು ಬಿಡಿ ನಂತರ ಸ್ಕ್ರಬ್​ ಮಾಡಿ, ಮತ್ತೆ ಮುಖವನ್ನ ಒಣಗಲು ಬಿಟ್ಟು ತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಹೀಗೆ ಮಾಡುವುದರಿಂದ ಎಂಥಹ ಸನ್​ಟ್ಯಾನ್​ ಆದರೂ ಮಂಗಮಾಯವಾಗುತ್ತೆ.

3. ಕಲ್ಲಂಗಡಿ: ಕಲ್ಲಂಗಡಿಯಲ್ಲಿ ಗ್ಲುಟಾಥಿಯೋನ್ ಎಂಬ ಆ್ಯಂಟಿ ಆಕ್ಸಿಡೆಂಟ್​ ಅಂಶವಿದ್ದು, ಇದು ಮೆಲನಿನ್ ಉತ್ಪಾದನೆಯನ್ನ ನಿಯಂತ್ರಿಸುತ್ತದೆ. ಕಲ್ಲಂಗಡಿ ಹಣ್ಣಿನ ಪೇಸ್ಟನ್ನ ಟ್ಯಾನ್​ ಆದ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಸನ್​ಬರ್ನ್​​​ನಿಂದ ಮುಕ್ತಿ ಹೊಂದಬಹುದು.

4. ಸೌತೆ ಕಾಯಿ ಮತ್ತು ನಿಂಬೆಹಣ್ಣಿನ ರಸ: ಸೌತೆಕಾಯಿ ಮತ್ತು ನಿಂಬೆಹಣ್ಣಿನ ರಸ ನಿಮ್ಮ ಚರ್ಮಕ್ಕೆ ಕೂಲಿಂಗ್​ ಅನುಭವವನ್ನ ನೀಡುವುದರ ಜೊತೆಗೆ, ನ್ಯಾಚುರಲ್​ ಬ್ಲೀಚ್​ ಒದಗಿಸುತ್ತದೆ. ಸೌತೆಕಾಯಿಗೆ ಒಂದೆರೆಡು ಟೀ ಸ್ಪೂನ್​ ನಿಂಬೆರಸ ಸೇರಿಸಿ, ಮುಖಕ್ಕೆ ಹಚ್ಚಿ, 10 ನಿಮಿಷಗಳ ನಂತರ ಮುಖ ತೊಳೆಯುವುದರಿಂದ ಟ್ಯಾನ್​ ಕಡಿಮೆ ಆಗಿ, ಚರ್ಮದ ಕಾಂತಿ ಹೆಚ್ಚುತ್ತದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv