ಅಮೇಜಿಂಗ್ ಹೋಮ್​​ ರೆಮಿಡೀಸ್​ ಫಾರ್​ ಕ್ಲೀನ್​ ಆ್ಯಂಡ್​ ಕ್ಲಿಯರ್​ ಸ್ಕಿನ್​..!

ಕ್ಲೀನ್​ ಆ್ಯಂಡ್​ ಕ್ಲಿಯರ್​ ಸ್ಕಿನ್​ ಯಾರಿಗೆ ತಾನೇ  ಬೇಡ ಹೇಳಿ..?  ಹೊಳೆಯುವ ತ್ವಚೆ ಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತೆದೆ. ಆದ್ರೆ ಕೆಲವೊಮ್ಮೆ ಹಾರ್ಮೋನ್​ಗಳ ಏರುಪೇರು, ಸನ್​ಟ್ಯಾನ್​, ಅತಿಯಾದ ಕಾಸ್ಮೆಟಿಕ್​ಗಳ ಬಳಕೆಯಿಂದ ಮುಖದಲ್ಲಿ ಮೊಡವೆಗಳು ಉಂಟಾಗಿ ಕಪ್ಪು ಕಲೆಗಳಾಗುತ್ತದೆ. ಇನ್ನು ಈ ಕಲೆಗಳಿಂದ ಮುಕ್ತಿ ಪಡೆಯೋಕೆ ಅಂತಾ ಎಷ್ಟೋ ಕಾಸ್ಲಿ ಕ್ರೀಮ್ಸ್​, ಫೇಸ್ ವಾಶ್​ಗಳಿಗೆ ದುಡ್ಡು ಖರ್ಚು ಮಾಡ್ತೀವಿ. ಅದೇನೇ ಇದ್ದರೂ ಈ ಪ್ರಾಡೆಕ್ಟ್ಸ್​ಗಳಲ್ಲೂ ಕೆಮಿಕಲ್​ ಕಡಿಮೆ ಇರಲ್ಲ. ಕೆಲವೊಮ್ಮೆ  ಸಮಸ್ಯೆ ಕಮ್ಮಿಯಾಗುವುದಕ್ಕಿಂತ ಹೆಚ್ಚಾಗುವ ಸಮಸ್ಯೆಗಳೇ ಜಾಸ್ತಿಯಾಗೋ ಸಾಧ್ಯತೆಗಳಿರುತ್ತೆ. ಅದಕ್ಕಾಗಿ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಇರೋ ಸಿಂಪಲ್​ ರೆಮಿಡಿಗಳನ್ನ ಟ್ರೈ ಮಾಡಿ.

1.ಪಪ್ಪಾಯಿ ಹಣ್ಣಿನ ಫೇಸ್​ ಪ್ಯಾಕ್​: ಪಪ್ಪಾಯಿ ಹಣ್ಣಿನಲ್ಲಿ ಪಪೈನ್​ ಎಂಬ ಅಂಶವಿದೆ. ಇದು ಚರ್ಮದ ಮೇಲಿನ ಕಲೆಗಳನ್ನ ಕಡಿಮೆ ಮಾಡಿ, ಹೊಳೆಯುವ ಚರ್ಮವನ್ನ ನೀಡುತ್ತದೆ. ಪಪ್ಪಾಯಿ ಹಣ್ಣಿಗೆ ಜೇನುತುಪ್ಪ, ಹಾಲಿನ ಕೆನೆ ಬೆರೆಸಿ, ಪೇಸ್​ ಮಾಡಿ ಮುಖಕ್ಕೆ ಮಾಸ್ಕ್​ ಹಾಕಿ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಿ. ಒಂದು ವೇಳೆ ನೀವು ಆಯ್ಲಿ ಸ್ಕಿನ್​ ಹೊಂದಿದ್ರೆ ಈ ಮಿಶ್ರಣದ ಜೊತೆ ನಿಂಬೆ ರಸವನ್ನ ಸೇರಿಸಿಕೊಂಡ್ರೆ, ಮುಖದಲ್ಲಿ ಆಯ್ಲಿನೆಸ್​ ಕಡಿಮೆಯಾಗುತ್ತದೆ. ನಿಂಬೆಹಣ್ಣಿನಲ್ಲಿ  ವಿಟಮಿನ್ C ಅಂಶವಿದ್ದು, ಡಾರ್ಕ್​ಸ್ಪಾಟ್ಸ್​ ಕಡಿಮೆ ಮಾಡಿ, ಪ್ಯಾಚನ್​ ಕೂಡಾ ಕಡಿಮೆ ಮಾಡುತ್ತದೆ.  ಹಾಲಿನ ಕೆನೆಯಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್​ ಮೈಬಣ್ಣವನ್ನು ತಿಳಿಗೊಳಿಸಿ, ಮಾಯಿಶ್ಚರೈಸ್​ ಮಾಡುತ್ತದೆ.

 

2. ಅಲೋವೆರಾ ಜೆಲ್,  ವಿಟಮಿನ್​ ಇ ಆಯಿಲ್, ನಿಂಬೆ ರಸದ ಫೇಸ್​ಪ್ಯಾಕ್​: ಅಲೋವೆರಾ ಜೆಲ್ ಜೊತೆ ವಿಟಮಿನ್​ ಇ ಆಯಿಲ್​ ಸೇರಿಸಿ, ನಿಂಬೆ ರಸವನ್ನು  ಬೆರೆಸಿ, ಮುಖಕ್ಕೆ ಮಾಸ್ಕ್​ ಹಾಕಿ. ಚೆನ್ನಾಗಿ ಒಣಗಿದ ನಂತರ ಶುಂಠಿ ನೀರಿನಿಂದ  ಮುಖ ತೊಳೆದುಕೊಳ್ಳಿ. ಇದು ಡೆಡ್​ಸ್ಕಿನ್ಸ್​, ಬ್ಲಾಕ್​ಹೆಡ್ಸ್​,  ತೆಗೆದುಹಾಕಿ, ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಮುಚ್ಚಿಹೋದ ರಂಧ್ರಗಳನ್ನ ಕೂಡಾ ಕ್ಲೀನ್​ ಮಾಡುತ್ತದೆ. ಆಲೋವೆರಾ ಜೆಲ್​ ನಿಮ್ಮ ಚರ್ಮಕ್ಕೆ ನ್ಯಾಚುರಲ್​ ಮಾಯಿಶ್ಚರೈಸರ್​ ಆಗಿ ಕೆಲಸ ಮಾಡುತ್ತದೆ. ಒಳ್ಳೆಯ ರಿಸಲ್ಟ್​ ಬೇಕು ಅಂದ್ರೆ ಪ್ರತಿದಿನ ಇ ಮಿಶ್ರಣವನ್ನ ನಿಮ್ಮ ಮುಖಕ್ಕೆ ಹಚ್ಚುತ್ತಿರಿ.

3.ನಿಂಬೆ ಮತ್ತು ಮೊಸರಿನ ಫೇಸ್​ಪ್ಯಾಕ್​: ನಿಮ್ಮ ಚರ್ಮಕ್ಕೆ ನಿಂಬೆ ಹಣ್ಣು ಎಷ್ಟು ಪ್ರಯೋಜನಕಾರಿ ಅಂತಾ ನಿಮಗೆ ಗೊತ್ತು. ನಿಂಬೆಹಣ್ಣುಗಳಲ್ಲಿ ವಿಟಮಿನ್​ ಸಿ ಮತ್ತು ಸಿಟ್ರಿಕ್ ಆಸಿಡ್​ ಹೇರಳವಾಗಿದ್ದು, ಕಂಪ್ಲೀಟ್​ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇದು ಡಾರ್ಕ್ ಸರ್ಕಲ್ಸ್​ ಕಡಿಮೆ ಮಾಡಿ ತ್ವಚೆ ಹೊಳೆಯುವಂತೆ ಮಾಡುತ್ತದೆ. ಇನ್ನು ಮೊಸರಿನಲ್ಲಿ ಕೂಡಾ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿದ್ದು, ಮೊಸರಿನ ಜೊತೆ ನಿಂಗೆ ಹಣ್ಣು ಬೆರೆಸಿ ಫೇಸ್​ಫ್ಯಾಕ್​ ಹಾಕಿಕೊಂಡ್ರೆ ನಿಮ್ಮ ಚರ್ಮ ಮೃದುವಾಗಿ ಹೊಳೆಯುತ್ತದೆ. ನಿಮ್ಮ ಫೇಸ್​ಪ್ಯಾಕ್​ಗೆ  ಸಕ್ಕರೆ ಕೂಡ ಸೇರಿಸಿಕೊಳ್ಳಬಹುದು ಇದು ನಿಮ್ಮ ಮುಖದಿಂದ  ಡೆಡ್​ಸ್ಕಿನ್​  ಮತ್ತು ಕೊಳೆಯನ್ನ ತೆಗೆದುಹಾಕುತ್ತದೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv