ಅತಿಯಾದ ಬೆವರಿನಿಂದ ಕಿರಿಕಿರಿ ಆಗ್ತಿದ್ಯಾ..? ಹಾಗಾದ್ರೆ ಹೀಗೆ ಮಾಡಿ

ಅತಿಯಾಗಿ ಬೆವರುವುದು ದುರ್ವಾಸನೆ ಬೀರುವುದರೊಂದಿಗೆ ಮುಜುಗರವನ್ನ ತಂದೊಡ್ಡುತ್ತದೆ. ಕೆಲವರು ಇತರರಿಗೆ ಹೋಲಿಸಿದರೆ ಅತಿಯಾಗಿ ಬೆವರುತ್ತಾರೆ. ಇದಕ್ಕೆ ಕಾರಣವೂ ಇದೆ. ನಮ್ಮ ದೇಹದಲ್ಲಿ ಸಾವಿರಾರು ಬೆವರು ಗ್ರಂಥಿಗಳಿವೆ.  ದೇಹದ ಉಷ್ಣತೆಯು ಹೆಚ್ಚಾಗುವಾಗ ಬೆವರು ಉತ್ಪತ್ತಿ ಮಾಡುವ ಎಕ್ರಿನ್ ಗ್ರಂಥಿಗಳು ನರಗಳ ವ್ಯವಸ್ಥೆ ಮೇಲೆ ಪ್ರಭಾವ ಬೀರಿ ಬೆವರು ಉತ್ಪತ್ತಿಯಾಗಲು ಪ್ರಚೋದಿಸುತ್ತದೆ. ಇದಲ್ಲದೆ ಹಾರ್ಮೋನ್​​​​​​​ ಬದಲಾವಣೆ, ಒತ್ತಡ, ಆತಂಕ ಅಥವಾ ಭಯ ಕೂಡಾ ಹೆಚ್ಚು ಬೆವರಲು ಕಾರಣವಾಗಬಹುದು. ಹೀಗಾದಾಗ ಏನು ಮಾಡಬೇಕು ಅನ್ನೋ ಟಿಪ್ಸ್​ ಇಲ್ಲಿದೆ.

1. ಆ್ಯಪಲ್ ಸೈಡರ್ ವಿನೆಗರ್: ಆ್ಯಪಲ್ ಸೈಡರ್ ವಿನೆಗರ್​ ನೈಸರ್ಗಿಕ​ ಅಸಿಡಿಕ್​ ಗುಣಗಳನ್ನ ಹೊಂದಿದೆ. ನಿಮ್ಮ ಅಂಗೈ, ಪಾದಗಳು ಮತ್ತು ದೇಹದ ಇತರ ಯಾವುದೇ ಭಾಗಗಳಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲಲು ಇದು ಸಹಾಯ ಮಾಡುತ್ತದೆ. ಬೆಚ್ಚಿಗಿನ ನೀರಿನಲ್ಲಿ ಸ್ವಲ್ಪ ಆ್ಯಪಲ್​ ಸೈಡರ್​ ವಿನೆಗರ್​ ಸೇರಿಸಿ, ಕಾಲನ್ನ ಈ ನೀರಿನಲ್ಲಿ 15 ರಿಂದ 20 ನಿಮಿಷಗಳವರೆಗೆ ಇರಿಸಿದ್ರೆ, ದುರ್ವಾಸನೆ ಬರುವುದಿಲ್ಲ. ಇನ್ನು ಈ ಮಿಶ್ರಣವನ್ನ ನಿಮ್ಮ ತೋಳುಗಳಿಗೂ ಹಚ್ಚಿಕೊಂಡರೆ ಬೆವರಿನಿಂದ ಉಂಟಾಗುವ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.

2. ಡಯೆಟ್​: ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ತಿಂದರೂ ಬೆವರು ಬರುತ್ತದೆ. ಕೆಲವು ಆಹಾರಗಳು ನಿಮ್ಮ ದೇಹದಲ್ಲಿ ಹೆಚ್ಚು ಬೆವರು ಉತ್ಪಾನೆಯಾಗಲು ಕಾರಣವಾಗಬಹುದು. ಹೆಚ್ಚು ಫೈಬರ್​ ಇರುವ ಆಹಾರವನ್ನ ಸೇವಿಸಿ. ಯಾಕಂದ್ರೆ ಕಡಿಮೆ ಫೈಬರ್ ಅಂಶವಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇನ್ನು ಹೆಚ್ಚಿನ ಸೋಡಿಯಂಯುಕ್ತ ಆಹಾರ ಸೇವಿಸಿದ್ರೆ ಮೂತ್ರ ಅಥವಾ ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ.  ಹೆಚ್ಚು ಡಯೆಟ್​ ಮಾಡುವುದರಿಂದಲೂ ನಿಮ್ಮ ದೇಹ ಬಿಸಿಯಾಗಿ ಬೆವರು ಹೆಚ್ಚಾಗುತ್ತದೆ. ಅತೀ ಹೆಚ್ಚು ಮಸಾಲೆಯುಕ್ತ ಆಹಾರ ಕೂಡಾ ಹೆಚ್ಚು ಬೆವರಲು ಕಾರಣವಾಗಬಹುದು.

3. ಸ್ಟೇ ಹೈಡ್ರೇಟೆಡ್​: ಹೆಚ್ಚು ನೀರು ಸೇವಿಸುವುದು ಮತ್ತು ನೀರಿನಂಶವಿರುವ ಆಹಾರವನ್ನ ಸೇವಿಸುವುರಿಂದ ನಿಮ್ಮ ದೇಹ ತಂಪಾಗಿರುತ್ತದೆ. ಮತ್ತು ವಿಪರೀತ ಬೆವರುವಿಕೆಯನ್ನು ತಡೆಗಟ್ಟುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಅತಿಯಾದ ಬೆವರುವಿಕೆಯನ್ನು ತಪ್ಪಿಸಲು ನಿಂಬೆ ಹಣ್ಣಿನ ಜ್ಯೂಸ್,​ ಫ್ರೆಶ್​​ ಫ್ರೂಟ್​​ ಜ್ಯೂಸ್​ ಹಾಗೂ ಎಳನೀರನ್ನ ಸೇವಿಸಿ.

4. ಆಲೂಗಡ್ಡೆ: ಆಲೂಗಡ್ಡೆಗಳಲ್ಲಿ ಆಲ್​ಕೈನಿಕ್​ ಎಂಬ​ ಅಂಶವಿದೆ. ಇದು ದೇಹದ pH ಮಟ್ಟವನ್ನು ಸಮತೋಲನಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಮತ್ತೊಂದೆಡೆ ಆಲೂಗಡ್ಡೆಗಳಲ್ಲಿ ಆ್ಯಸಿಡಿಕ್​ ಅಂಶಗಳು ಕಡಿಮೆ ಇದ್ದು, ವಿಪರೀತ ಬೆವರುವುದನ್ನ ತಡೆಗಟ್ಟುತ್ತದೆ. ಹೆಚ್ಚು ಬೆವರುವ ಜಾಗದಲ್ಲಿ ಆಲೂಗೆಡ್ಡೆ ಸ್ಲೈಸ್​ನಿಂದ ರಬ್​ ಮಾಡಿ, ತಣ್ಣನೆಯ ನೀರಿನಿಂದ ತೊಳೆಯಿರಿ ಈ ರೀತಿ ಮಾಡಿದ್ರೆ ಬೆವರು ಕಡಿಮೆಯಾಗುತ್ತದೆ.

5. ನಿಂಬೆ ಹಣ್ಣು: ನಿಂಬೆ ಹಣ್ಣು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಹಾಗೂ ವಿಪರೀತ ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ಪ್ರಮಾಣದ ನಿಂಬೆ ರಸವನ್ನು ಬೇಕಿಂಗ್ ಸೋಡಾದೊಂದಿಗೆ ಮಿಶ್ರ ಮಾಡಿ ಮತ್ತು ಅದನ್ನು ಹತ್ತಿ ಉಂಡೆಯಿಂದ ಹೆಚ್ಚು ಬೆವರುವ ಜಾಗಗಳಿಗೆ ಹಚ್ಚಿ. ಇದು ಬೆವರು ಮತ್ತು ಬೆವರಿನ ವಾಸನೆಯನ್ನ ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.

Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv