ನಕ್ಕು ನಗಿಸಲು ಮತ್ತೊಮ್ಮೆ ಬರ್ತಿದೆ ‘ಸಿಲ್ಲಿ ಲಲ್ಲಿ’..!

ಸಿಲ್ಲಿ ಲಲ್ಲಿ.. ಕನ್ನಡ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಯಶಸ್ಸು ಕಂಡ ಧಾರವಾಹಿ. ಈ ಧಾರವಾಹಿ ಬಂತೆಂದರೇ ಜನರು ಟಿ.ವಿ ಮುಂದೆ ಹಾಜರಾಗುತ್ತಿದ್ದರು. ಹೊಟ್ಟೆ ಉಣ್ಣಾಗುವಷ್ಟು ನಗುತ್ತಿದ್ದರು. ದಿನ್ಯ ನಿತ್ಯದ ವಿಚಾರಗಳನ್ನೇ ಇಟ್ಟುಕೊಂಡು ಕಥೆ ಬರೆಯಲಾಗುತ್ತಿತ್ತು. ಆದ್ದರಿಂದ ಎಲ್ಲರೂ ಇಷ್ಟಪಟ್ಟು ನೋಡುತ್ತಿದ್ದರು. ಡಾ.ವಿಠ್ಠಲ್​ ರಾವ್​ನಂತಹ ಪಾತ್ರಗಳು ಜನಮಾನಸದಲ್ಲಿ ಸೇರಿ ಹೋಗಿದ್ದವು. ಇದೀಗ ‘ಸಿಲ್ಲಿ ಲಲ್ಲಿ’ ಮತ್ತೊಮ್ಮೆ ಜನರನ್ನು ನಗಿಸೋಕೆ ಬರ್ತಿದೆ.

ರವಿಶಂಕರ್ ಇರಲ್ಲ..!
ಸಿಲ್ಲಿ ಲಲ್ಲಿ ಅಂದಾಕ್ಷಣ ನೆನಪಾಗೋದು ಡಾ.ವಿಠ್ಠಲ್​ ರಾವ್​ ಪಾತ್ರ. ವೈದ್ಯನಾಗಿ ರವಿಶಂಕರ್ ಗೌಡ ಸಿಕ್ಕಾಪಟ್ಟೆ ನಗು ತರಿಸಿದ್ದರು. ಇದೀಗ ಸಿಹಿಕಹಿ ಚಂದ್ರು ಮತ್ತೊಮ್ಮೆ ಆ ಯುಗವನ್ನು ಕಟ್ಟಿಕೊಡಲು ಮುಂದಾಗಿದ್ದಾರೆ. ಸಿಲ್ಲಿ ಲಲ್ಲಿ ಧಾರವಾಹಿ ತರುವ ಸಾಹಸ ಮಾಡುತ್ತಿದ್ದಾರೆ. ಆದ್ರಿಲ್ಲಿ ರವಿಶಂಕರ್​​ ಮತ್ತಿತ್ತರ ಪಾತ್ರಧಾರಿಗಳು ಇರುವುದಿಲ್ಲ. ಬದಲಾಗಿ ಆ ಪಾತ್ರಗಳಲ್ಲಿ ಹೊಸಮುಖಗಳು ಕಾಣಿಸಿಕೊಳ್ಳಲಿವೆ. ಈ ಸಂತಸವನ್ನು ರವಿಶಂಕರ್​ಗೌಡ ಟ್ಟಿಟ್ಟರ್​ವಲ್ಲಿ ಹಂಚಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv