ದೇಶದ 100ನೇ ಏರ್​ಪೋರ್ಟ್, ​ ಹಿಮಾಲಯದ ತಪ್ಪಲಿನಲ್ಲಿ ರೆಡಿ ಟು ಟೇಕಾಫ್​..!

ಮೊದಲೇ ಅದು ಹಿಮಾಲಯದ ತಪ್ಪಲಿನಲ್ಲಿರುವ ಸುರಸುಂದರ ರಾಜ್ಯ. ಹೆಸ್ರು ಸಿಕ್ಕಿಂ. ಅಲ್ಲಿ 4,500 ಅಡಿ ಎತ್ತರದಲ್ಲಿ ದೇಶದ 100ನೇ ಏರ್​ಪೋರ್ಟ್​ ರೆಡಿ ಟು ಟೇಕಾಫ್​ ಅಂತ ಶೃಂಗಾರಗೊಂಡು ಸಜ್ಜಾಗಿದೆ. ಇದರೊಂದಿಗೆ ಸಿಕ್ಕಿಂ ರಾಜ್ಯಕ್ಕೆ ಮೊದಲ ಏರ್​ಪೋರ್ಟ್​ ಪ್ರಾಪ್ತಿಯಾದಂತಾಗಿದೆ.

ಇದು ಸಾಧ್ಯವಾಗಿರುವುದು ಉಡಾನ್ (UDAN scheme) ಯೋಜನೆಯಡಿ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್​ 23ರಂದು ಸ್ವರ್ಗದಂತಿರುವ ಈ ಏರ್​ಪೋರ್ಟ್ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಕ್ಟೋಬರ್​ 8ರಿಂದ ಸ್ಪೈಸ್​ ಜೆಟ್ ವಿಮಾನ ಸಂಸ್ಥೆ ಮೊದಲ ವಿಮಾನ ಯಾನವನ್ನು ಆರಂಭಿಸಲಿದೆ. ​

ಅಂದಹಾಗೆ ವಿಶ್ವದ ಅತಿ ಎತ್ತರದ ನಾಗರಿಕ ವಿಮಾನ ನಿಲ್ದಾಣ ಚೀನಾದ ದಾವೊಚೆಂಗ್​ ಬಳಿ 14,472 ಅಡಿ ಎತ್ತರದಲ್ಲಿದೆ. 605 ಕೋಟಿ ರೂ. ವೆಚ್ಚದ ಸಿಕ್ಕಿಂನ ನೂತನ ಪಕಯೊಂಗ್​ ಏರ್​ಪೋರ್ಟ್, ಸಿವಿಲ್​ ಎಂಜಿನಿಯರಿಂಗ್​ಗೆ ಸವಾಲಿನಂತಿದ್ದು, ಮಾದರಿ ನಿಲ್ದಾಣವಾಗಿ ರೂಪಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv