ಮೊದಲ ಬಾಲ್​​ಗೆ ಸಿಕ್ಸ್​​ ಸಿಡಿಸಲು 5 ವರ್ಷ ಬೆಂಚ್​ ಕಾಯ್ದ ಲಾಡ್..!

ಮುಂಬೈ: ವಾಂಖೆಡೆ ಮೈದಾನದಲ್ಲಿ ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್ ನೀಡಿದ 198ರನ್​ಗಳ ಗುರಿಯನ್ನು ​ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ 3 ವಿಕೆಟ್​ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಇನ್ನೂ ಒಂದು ವಿಶೇಷವಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬದಲಾಗಿ ಕಣಕ್ಕಿಳಿದ್ದ ಸಿದ್ದೇಶ್​ ಲಾಡ್ ಈಗ ಫುಲ್ ಲೈಮ್​ಲೈಟ್​ನಲ್ಲಿದ್ದಾರೆ. ನಿನ್ನೆಯ ಪಂದ್ಯದ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ ಲಾಡ್​​ ತಾನಾಡಿದ ಮೊದಲ ಎಸೆತವನ್ನೇ ಸಿಕ್ಸರ್​ಗಟ್ಟಿದರು.
ಆದ್ರೆ 26 ವರ್ಷದ ಸಿದ್ದೇಶ್​ ಲಾಡ್, ತನ್ನ ಡೆಬ್ಯೂ ಮ್ಯಾಚ್​ಗೆ ಬರೋಬ್ಬರಿ 5 ವರ್ಷ ಮುಂಬೈ ತಂಡದ ಬೆಂಚ್​ ಕಾಯ್ದಿದಿದ್ದಾರೆ. 2015ರಿಂದ ಮುಂಬೈ ತಂಡದಲ್ಲಿದ್ದ ಲಾಡ್​ಗೆ ಟೀಮ್ ಮ್ಯಾನೇಜ್​ಮೆಂಟ್ ಇದುವರೆಗೂ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡಿರಲಿಲ್ಲ. ಇನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಬದಲಾಗಿ ಕೀರನ್ ಪೊಲಾರ್ಡ್​ ಮುಂಬೈ ತಂಡವನ್ನು ಮುನ್ನಡೆಸಿದ್ರು. ಇಲ್ಲಿ ಮತ್ತೊಂದು ವಿಶೇಷ ಅಂದ್ರೆ, 2008ರಿಂದ ಐಪಿಎಲ್ ಆಡುತ್ತಿರುವ ರೋಹಿತ್​ ಇಷ್ಟೂ ಸೀಸನ್​ಗಳ ನಡುವೆ ಇದೇ ಮೊದಲ ಬಾರಿಗೆ ಐಪಿಎಲ್​ ಪಂದ್ಯವೊಂದನ್ನು ಮಿಸ್​ ಮಾಡಿಕೊಂಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv