ರೆಸಾರ್ಟ್‌ನಲ್ಲಿರೋ ಶಾಸಕರಿಗೆ ಸಿದ್ದರಾಮಯ್ಯ ಪಾಠ, ಹೇಳಿದ್ದೇನು..?

ರಾಮನಗರ: ಆಪರೇಷನ್ ಕಮಲದಿಂದ ಪಾರಾಗಲು ಕಾಂಗ್ರೆಸ್ ಶಾಸಕರು ಬಿಡದಿ ಬಳಿಯ ಈಗಲ್ಟನ್ ಹಾಗೂ ವಂಡಲ್‌ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ರೆಸಾರ್ಟ್‌ನಲ್ಲಿರೋ ಶಾಸಕರಿಗೆ ತಡ ರಾತ್ರಿವರೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ. ನಾವು ಹೇಳುವ ತನಕ ರೆಸಾರ್ಟ್‌ನಲ್ಲೇ ನೀವೆಲ್ಲರೂ ತಂಗಬೇಕು. ಈಗಾಗಲೇ ನಾಲ್ವರು ಶಾಸಕರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಈಗ ಮತ್ತಷ್ಟು ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿ ಕೂಡ ಸರಿಯಾಗಿಲ್ಲ. ಬಿಜೆಪಿಯವರು ನಿಮಗೆ ಕೋಟಿ ಕೋಟಿ ಹಣ ಹಾಗೂ ಮಂತ್ರಿ ಮಾಡುವ ಆಮಿಷ ಒಡ್ಡಿದ್ದಾರೆ. ಆದರೂ ಅವರ ಆಮಿಷಕ್ಕೆ ಒಳಗಾಗದೇ ನೀವೆಲ್ಲರೂ ನಮ್ಮ ಜೊತೆ ಇರುವುದಕ್ಕೆ ನಮಗೆ ಖುಷಿಯಿದೆ. ನಿಮ್ಮ ಬೇಡಿಕೆಗಳು ಏನೇ ಇದ್ದರೂ ಅದನ್ನು ಈಡೇರಿಸುತ್ತೇವೆ. ಯಾವುದೇ ಕಾರಣಕ್ಕೂ ಬಿಜೆಪಿಯ ಆಮಿಷಕ್ಕೆ ಒಳಗಾಗಬೇಡಿ ಅಂತಾ ಬುದ್ಧಿ ಮಾತು ಹೇಳಿದ್ದಾರೆ ಎನ್ನಲಾಗಿದೆ. ಸುಮಾರು ಒಂದುವರೆ ಗಂಟೆಗಳ ಕಾಲ ಶಾಸಕರ ಜೊತೆ ಚರ್ಚೆ ನಡೆಸಿದ ಬಳಿಕ ಸಿದ್ದರಾಮಯ್ಯ ರೆಸಾರ್ಟ್‌ನಿಂದ ಮನೆಗೆ ತೆರಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv