‘ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಆದ್ರೆ ಚುನಾವಣೆಗೆ ನಿಲ್ಲಲ್ಲ’

ಮೈಸೂರು: ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಆದ್ರೆ ಚುನಾವಣೆಗೆ ನಿಲ್ಲಲ್ಲ. ಬದಾಮಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಹೋಗಿ ಥ್ಯಾಂಕ್ಸ್​ ಹೇಳಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ತೀರ್ಪನ್ನು ನೀಡಿದ್ದಾರೆ. ಇದರ ಬಗ್ಗೆ ವಿಶ್ಲೇಷಣೆ ಮಾಡೋಕೋಗಲ್ಲಾ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಬದಾಮಿ ಜನ ಕೈ ಹಿಡಿದಿದ್ದಾರೆ. ಚಾಮುಂಡೇಶ್ವರಿ ಜನ ಕೈ ಹಿಡಿದಿಲ್ಲಾ ಅಂತ ಹೇಳಿದ್ದು ಅಷ್ಟೇ ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ಅತೃಪ್ತರ ವಿಚಾರಕ್ಕೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಯಾರು ಅತೃಪ್ತರೇ ಇಲ್ಲ ಎಲ್ಲರೂ ತೃಪ್ತರಾಗಿದ್ದಾರೆ. ಬಿಜೆಪಿಯವರು ಎಷ್ಟೇ ಆಮಿಷ ಒಡ್ಡಿದರೂ ನಮ್ಮ ಎಂ​ಎಲ್​ಎಗಳೂ ಯಾರೂ ಹೋಗಲ್ಲ. ಅವರು ಎಲ್ಲಾ ಪ್ರಯತ್ನನೂ ಮಾಡಿ ಆಯ್ತು. ಸಮ್ಮಿಶ್ರ ಸರ್ಕಾರ ಬೀಳುತ್ತೆ ಎಂಬ ಯಡಿಯೂರಪ್ಪ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಯಾವಾಗ ಏನು ಮಾತಾಡುತ್ತಾರೆ ಅವರಿಗೆ ಗೊತ್ತಿಲ್ಲ. ನನಗೆ ಈಡೀ ಕರ್ನಾಟಕದ ಜನ ಪ್ರೀತಿ ತೋರಿಸಿದ್ದಾರೆ. ಅದಕ್ಕೆ ಪಾಪ ಯಡಿಯೂರಪ್ಪಗೂ ಥ್ಯಾಂಕ್ಸ್​ ಹೇಳೋಣ ಎಂದರು. ಇನ್ನು, ಕುಮಾರಸ್ವಾಮಿ ನನಗೆ ಮುಖ್ಯಮಂತ್ರಿ ಸ್ಥಾನ ಬೇಕಿರಲಿಲ್ಲ ಎಂಬ ಹೇಳಿಕೆಗೆ ಸಿದ್ದರಾಮಯ್ಯನವರು ನಾನೂ ಮಾತನಾಡಲ್ಲ… ನೋ ರಿಯಾಕ್ಷನ್ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv