14 ವರ್ಷದ ರಾಜಕೀಯ ವೈರತ್ವದ ಬಳಿಕ ಒಂದೇ ಕ್ಷೇತ್ರದಲ್ಲಿಂದು ಸಿದ್ದರಾಮಯ್ಯ, ಜಿಟಿಡಿ ಪ್ರಚಾರ

ಮೈಸೂರು: 14 ವರ್ಷದ ರಾಜಕೀಯ ವೈರತ್ವದ ಬಳಿಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಿ. ಟಿ ದೇವೇಗೌಡ ಇಂದು ಒಂದೇ ವೇದಿಕೆ, ಒಂದೇ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಪ್ರತಿಷ್ಠಿತ ನಾಯಕರ ಜಂಟಿ ಪ್ರಚಾರಕ್ಕಿಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಈ ಹಿಂದೆ ಜನತಾ ಪರಿವಾರದಲ್ಲಿ ಒಂದಾಗಿದ್ದ  ಈ ಇಬ್ಬರು ನಾಯಕರು ಇಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ  ಭರ್ಜರಿ ಪ್ರಚಾರ ನಡೆಸಲಿದ್ದಾರೆ. ವೈಮನಸ್ಸು ಬಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಒಂದಾಗಿ ಎಂದು ಕಾರ್ಯಕರ್ತರಿಗೆ  ಕರೆ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಕಡಕೊಳ, ಮಧ್ಯಾಹ್ನ 12.30ಕ್ಕೆ ಜಯಪುರ, ಮಧ್ಯಾಹ್ನ 3ಕ್ಕೆ ಇಲವಾಲ‌, ಹಿನಕಲ್, ಹೂಟಗಳ್ಳಿ ಹಾಗೂ ಸಂಜೆ 5ಕ್ಕೆ ಸಿದ್ದಲಿಂಗಪುರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಂಟಿ ನಾಯಕರು  ಪ್ರಚಾರ ನಡೆಸಲಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv