ಯಡಿಯೂರಪ್ಪ ಸಿಎಂ ಆಗಿದ್ದಾಗ ಏನ್​ ಕಡಿದು ಕಟ್ಟೆ ಹಾಕಿದ್ದಾರೆ ನಿಮಗೇ ಗೊತ್ತಿದೆ: ಸಿದ್ದರಾಮಯ್ಯ

ಹುಬ್ಬಳ್ಳಿ: ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಏನ್​ ಕಡಿದು ಕಟ್ಟೆ ಹಾಕಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗೋದು ಯಾಕೆ, ರಾಜ್ಯವನ್ನ ಲೂಟಿ ಮಾಡಲಿಕ್ಕಾ? ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಬಿಎಸ್​ವೈ ವಿರುದ್ಧ ಕಿಡಿಕಾರಿದ್ದಾರೆ. ಕುಂದಗೋಳ ಉಪ-ಚುನಾವಣೆ ಹಿನ್ನೆಲೆಯಲ್ಲಿ ಬೆಳಗಲಿ ಗ್ರಾಮದಲ್ಲಿ ರೋಡ್‌ಶೋ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಕೇವಲ ಮಾತನಾಡುತ್ತಾರೆ, ಅವರ ಮಾತಿನಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ಮೋದಿ ಬಡವರ ಸಾಲ ಮನ್ನಾ ಮಾಡಲಿಲ್ಲ, ಶ್ರೀಮಂತರ ಸಾಲ ಮನ್ನಾ ಮಾಡಿದ್ರು. ಬಿಜೆಪಿಯವರು ಮತ ಕೇಳಲು ಬಂದಾಗ, ಅವರಿಗೆ ಮೊದಲು ₹15 ಲಕ್ಷ ಕೊಡಿ ಆಮೇಲೆ ಮತ ಕೇಳಿ ಅಂತಾ ಹೇಳಿ. ಈ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರಿಗೆ ಎಲೆ ಅಡಿಕೆ ತಿನ್ನುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಮೇಲಾಗಿ ಶಿವಳ್ಳಿ ರಾಜಕಾರಣಿಗಿಂತ, ಒಬ್ಬ ಜನ ಸೇವಕ. ಶಿವಳ್ಳಿ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲಿಲ್ಲ. ಗಮನ ಕೊಟ್ಟಿದ್ದರೆ, ನಾವು ಇವತ್ತು ಅವನನ್ನ ಕಳೆದುಕೊಳ್ಳುತ್ತಿರಲಿಲ್ಲ. ಮಂತ್ರಿಯಾಗಿ ಮೂರು ತಿಂಗಳ ಇದ್ದ ಶಿವಳ್ಳಿಯ ಅವರ ಜಾಗವನ್ನ ಭರ್ತಿ ಮಾಡಬೇಕಾದ್ರೆ, ಅವರ ಧರ್ಮಪತ್ನಿ ಕುಸುಮಾ ಶಿವಳ್ಳಿಗೆ ಮತ ಹಾಕಿ. ಕ್ಷೇತ್ರದ ಜನ ಅವರಿಗೆ ಆಶೀರ್ವಾದ ಮಾಡಬೇಕು ಅಂತಾ ಕರೆ ನೀಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv