ತೇಜಸ್ವಿ, ಪ್ರತಾಪ್​, ಕಟೀಲ್​ಗೆ ವೋಟ್​ ಮಾಡುವ ಮುನ್ನ ಯೋಚಿಸಿ -ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆದಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮಧ್ಯೆ, ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ ಮೂವರು ಅಭ್ಯರ್ಥಿಗಳಿಗೆ ಮತ ಹಾಕ ಬೇಡಿ ಅಂತಾ ಮತದಾರರಲ್ಲಿ ಮನವಿ ಮಾಡಿದ್ದರು. ಬೆಂ. ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ, ಮೈಸೂರು-ಕೊಡಗು ಕ್ಷೇತ್ರದ ಪ್ರತಾಪ್​ ಸಿಂಹ ಹಾಗೂ ದಕ್ಷಿಣ ಕನ್ನಡ ಕ್ಷೇತ್ರದ ನವೀನ್​ ಕುಮಾರ್​ ಕಟೀಲ್​ ಅವರ ಭಾವ ಚಿತ್ರಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡು, ಇವರಿಗೆ ತಮ್ಮ ಹಾಕುವ ಮುನ್ನ ಯೋಚಿಸಿ ಅಂತಾ ಹೇಳಿದ್ದಾರೆ. ಇವರಲ್ಲಿ ಒಬ್ಬ ಮಹಿಳೆಯನ್ನು ದುರುಪಯೋಗ ಪಡಿಸಿಕೊಂಡವ.. ಇನ್ನೊಬ್ಬ ಮಹಿಳೆಗೆ ವಂಚನೆ ಮಾಡಿದವ.. ಹಾಗೂ ಮತ್ತೊಬ್ಬ ಮಹಿಳಾ ವಿರೋಧಿ.. ಇಂತಹವರಿಗೆ ವೋಟ್​ ಮಾಡಬೇಡಿ. ವೋಟ್​ ಮಾಡುವ ಮೊದಲು ನಿಮ್ಮ ಸಹೋದರಿ, ನಿಮ್ಮ ಪತ್ನಿ, ತಾಯಿ ಹಾಗೂ ಗೆಳತಿಯ ಬಗ್ಗೆ ಯೋಚನೆ ಮಾಡಿ ಅಂತಾ ಟ್ವೀಟ್​ ಮಾಡಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv