ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಮಾಡಿದ ವ್ಯಂಗ್ಯವೇನು..?

ಕೊಪ್ಪಳ: ನಾನು ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕೊಪ್ಪಳ ತಾಲೂಕಿನ‌ ಬಸಾಪೂರ ಸಮೀಪದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ನೊಂದಿಗೆ ಮೈತ್ರಿ ಇರುತ್ತದೆ ಎಂದರು.
ಸಿದ್ದರಾಮಯ್ಯ ಗುಮಾಸ್ತನಂತೆ ಪತ್ರ ಬರೆಯುತ್ತಾರೆ ಎಂಬ ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ ಹೇಳಿಕೆಗೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಹೇ ಅವನ ಮಾತಿಗೆಲ್ಲಾ ರಿಯಾಕ್ಟ್​​ ಮಾಡೋಕ್​ ಆಗಲ್ಲ ರೀ.. ಈಶ್ವರಪ್ಪ ಮಹಾನ್ ಪೆದ್ದ ಎಂದ ಸಿದ್ದರಾಮಯ್ಯ, ಕೈಸನ್ನನ್ನೆ ಮೂಲಕ ಈಶ್ವರಪ್ಪಗೆ ತಲೆ ಸರಿಯಿಲ್ಲ ಅಂತ ಟಾಂಗ್ ನೀಡಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv