ಮೂರ್ಖ ಜೋಶಿ, ಮೋದಿ ನೋಡಿ ಮತ ಹಾಕಿ ಅನ್ನುತ್ತಿದ್ದಾರೆ -ಸಿದ್ದರಾಮಯ್ಯ ವ್ಯಂಗ್ಯ

ಧಾರವಾಡ: ಮೂರ್ಖ ಜೋಶಿ, ಮೋದಿ ನೋಡಿ ಮತ ಹಾಕು ಎನ್ನುತ್ತಿದ್ದಾರೆ. ಹಾಗಾದ್ರೆ, ಜೋಶಿ ಯಾಕೆ ಸ್ಪರ್ಧೆ ಮಾಡಿದ್ರು. ಇಂತಹ ಜೋಶಿಗೆ ನೀವು ಮತ ಹಾಕಬೇಡಿ, ವಿನಯ್ ಕುಲಕರ್ಣಿಗೆ ಮತಹಾಕಿ ಅವರನ್ನ ಲೋಕಸಭೆಗೆ ಕಳುಹಿಸಿ ಕೊಡಿ ಅಂತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಪರ ಪ್ರಚಾರಕ್ಕೆ ಕುಂದಗೋಳ ಪಟ್ಟಣಕ್ಕೆ ಸಿದ್ದರಾಮಯ್ಯ ಆಗಮಿಸಿದ್ರು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ ಜೋಶಿ ಕುಂದಗೋಳಕ್ಕೆ ಏನು ಮಾಡಿದ್ದಾರೆ. ಶಿವಳ್ಳಿ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ, ಅನಂತಕುಮಾರ ಮೋದಿಯವರನ್ನ ದಾರಿ ತಪ್ಪಿಸಿದ್ರು. ಮೂರು ರಾಜ್ಯದ ಮುಖ್ಯಮಂತ್ರಿಗಳನ್ನ ಸಂಧಾನಕ್ಕೆ ನೀವು ಒಪ್ಪಿಕೊಳ್ಳಬೇಡಿ ಎಂದು ಮೋದಿಗೆ ಹೇಳಿದ್ದರು. ಇಂತಹ ಜೋಶಿಗೆ ನೀವು ಮತ ಹಾಕಬೇಡಿ ಅಂತಾ ಸಿದ್ದರಾಮಯ್ಯ ಹೇಳಿದರು.

‘ಕುಂದಗೋಳದ ಜನರೇ ಶಿವಳ್ಳಿ ಆಸ್ತಿ’
ಶಿವಳ್ಳಿ ಆಸ್ತಿ ಅಂತಾ ಏನನ್ನೂ ಮಾಡಲಿಲ್ಲ. ಕುಂದಗೋಳದ ಜನರೇ ಅವರ ಆಸ್ತಿ. ಜನರ ಮಧ್ಯ ಇದ್ದ ರಾಜಕಾರಣಿ ನಮ್ಮನ್ನ ಅಗಲಿದ್ದಾರೆ. ಆಪರೇಷನ್ ಕಮಲ ಮಾಡಲು ಬಿಜೆಪಿಯವರು ಶಿವಳ್ಳಿ ಅವರಿಗೆ ₹25 ಕೋಟಿ ಆಮಿಷ ಇಟ್ಟಿದ್ದರು. ನಮ್ಮ ಶಿವಳ್ಳಿ ಅದಕ್ಕೆ ಏನೂ ಮನಸ್ಸು ಮಾಡಲಿಲ್ಲ ಅಂತಾ ಸಿದ್ದರಾಮಯ್ಯ ಶಾಸಕ ಶಿವಳ್ಳಿಯನ್ನು ನೆನೆದರು.