‘ನಾನೇನು ಸನ್ಯಾಸಿಯಲ್ಲ; ಸಿಎಂ ಆಗ್ತೀನಿ ಎಂದಿದ್ದೆ, ಆದ್ರೆ ನಾಳೆಯೇ ಆಗ್ತೀನಿ ಎಂದಿಲ್ಲ’

ದಾವಣಗೆರೆ: ಬಿ.ಎಸ್.ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ, ಅಧಿಕಾರದ ಹುಚ್ಚು ಹಿಡಿದಿದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಬೀಳುತ್ತೆ ಎನ್ನುತ್ತಾರೆ ಎಂದು ಕಿಡಿ ಕಾರಿದ್ರು. ನಾನು ಮುಂದೆ ನಮ್ಮ ಸರ್ಕಾರ ಬಂದರೆ ಸಿಎಂ ಆಗುತ್ತೇನೆ ಎಂದಿರುವೆ. ನಾಳೆಯೇ ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ನಾನು ಸಿಎಂ ಆದ್ರೆ 10 ಕೆ.ಜಿ ಅಕ್ಕಿ ಕೊಡುವೆ ಎಂದಿರುವೆ. ನಾನು ಸನ್ಯಾಸಿಯಲ್ಲ ಅಂತಾ ಸಿದ್ದರಾಮಯ್ಯ ತಿರುಗೇಟು ನೀಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv