ಸೋಲೋ ಭೀತಿಯಿಂದ ಸಿದ್ದರಾಮಯ್ಯಗೆ ದಲಿತರ ನೆನಪಾಗುತ್ತಿದೆ: ಶ್ರೀರಾಮುಲು

ಬಳ್ಳಾರಿ: ಸಿದ್ದರಾಮಯ್ಯನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕೆ ಚುನಾವಣೆ ಬಳಿಕ ದಲಿತರ ನೆನಪಾಗುತ್ತಿದೆ ಎಂದು ಬಿ. ಶ್ರೀರಾಮುಲು ಕುಟುಕಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯರಿಗೆ ಇಷ್ಟು ದಿನ ನಾನೇ ಎಂಬ ಅಹಂಕಾರ ಇತ್ತು. ಸೋಲಿನ ಹತಾಶೆಯಿಂದ ಈಗ ರಾಗ ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಎರಡೂ ಕ್ಷೇತ್ರಗಳಲ್ಲಿ ಸಿಎಂ ಸೋಲಲಿದ್ದಾರೆ. ಅವರು ಸೋತ ಬಳಿಕ ರಾಜಕೀಯ ಅತಂತ್ರ ಅವರನ್ನು ಬಾಧಿಸುತ್ತದೆ.  ಸಲಹೆಗಳಿಗೆ ಮಾತ್ರ ಸೀಮಿತರಾಗ್ತಾರೆ ಎಂದರು. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗೋದರಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv